ನವದೆಹಲಿ; ಆಪರೇಷನ್ ಸಿಂಧೂರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ. ಇಡೀ ದೇಶವೇ ಈ ದಿನಕ್ಕೋಸ್ಕರ ಕಾಯುತ್ತಾ ಇದೆ. ಯಾಕಂದ್ರೆ ಉಗ್ರರಿಗೆ ನಡುಕ ಹುಟ್ಟಿಸಿದ ಪ್ರಧಾನಿ ಮೋದಿ ಮಾತುಗಳನ್ನು ಕೇಳುವುದಕ್ಕೇನೆ ಚೆಂದ. ಜೊತೆಗೆ ಕದನ ವಿರಾಮ ಘೋಷಣೆಯಾಗಿದೆ. ಅದರ ಮುಂದುವರೆದ ಭಾಗವೇನು..? ಮೋದಿಯವರು ಮುಂದಿನ ನಿರ್ಧಾರವನ್ನ ಏನು ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಇಡೀ ಭಾರತೀಯರಿಗೆ ಇದೆ. ಹೀಗಾಗಿ ರಾತ್ರಿ ಮೋದಿಯವರು ಆಡುವ ಮಾತುಗಳಿಗಾಗಿ ಇಡೀ ದೇಶವೇ ಕಾಯ್ತಾ ಇದೆ.
ಭಾರತ, ಪಾಕಿಸ್ತಾನದ ನಡುವೆ ನಾಲ್ಕು ದಿನದ ಸಂಘರ್ಷದ ಬಳಿಕ ಕದನ ವಿರಾಮ ಘೋಷಣೆಯಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಪರಾಕ್ರಮ ಪ್ರದರ್ಶನವಾಗಿದೆ. ಕದನ ವಿರಾಮದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡುತ್ತಿದ್ದಾರೆ. ಭಯೋತ್ಪಾದನೆಯನ್ನ ಭಾರತ ಎಂದಿಗೂ ಸಹಿಸಿಕೊಳ್ಳಯವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನ ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಾರಿ ಸಾರಿ ಹೇಳಿದೆ.
ಉಗ್ರರಿಗೆ ಪಾಕಿಸ್ತಾನ ಕುಮ್ಮಕ್ಕು ಕೊಡುತ್ತಾ ಇರೋದು ಗೊತ್ತಿರುವ ವಿಚಾರವೇ ಸರಿ. ಆದರೆ ಈ ಭಯೋತ್ಪಾದನೆಯನ್ನು ನಮ್ಮ ಭಾರತ ಸಹಿಸುವುದಿಲ್ಲ. ಹೀಗಾಗಿಯೇ ಆ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡಿದೆ. ಈಗಾಗಲೇ ಸಿಂಧೂ ನದಿ ನೀರು ಒಪ್ಪಂದ, ಶಿಮ್ಲಾ ಒಪ್ಪಂದ ಅಮಾನತು ಮಾಡಿದೆ. ಪಾಕಿಸ್ತಾನದ ಪ್ರಜೆಗಳನ್ನ ದೇಶ ಬಿಟ್ಟು ಹೋಗುವಂತೆ ಸೂಚನೆ ನೀಡಿತ್ತು. ಇದಾದ ಬಳಿಕ ಆಪರೇಷನ್ ಸಿಂಧೂರ ನಡೆಸಿದ ಭಾರತೀಯ ಸೇನೆ ಸುಮಾರು 100ಕ್ಕೂ ಹೆಚ್ಚು ಉಗ್ರರನ್ನ ಸದೆ ಬಡಿದಿದೆ. ಈ ಎಲ್ಲಾ ಬೆಳವಣಿಗೆಯ ವಿಚಾರವಾಗಿ ಪ್ರಧಾನಿ ಮೋದಿ ಅವರ ಭಾಷಣ ಬಹಳ ಮುಖ್ಯವಾಗಿದೆ. ಹೀಗಾಗಿಯೇ ಇಡೀ ದೇಶ ಪ್ರಧಾನಿ ಮೋದಿಯವರ ಭಾಷಣಕ್ಕೆ ಕಾಯ್ತಾ ಇದ್ದಾರೆ.
