Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಷರತ್ತುಗಳಿಲ್ಲದಂತೆ ಗ್ಯಾರೆಂಟಿಗಳನ್ನು ಜಾರಿಗೆ ತನ್ನಿ, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ :  ನವೀನ ಚಾಲುಕ್ಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಜೂ.06) :  ರಾಜ್ಯದಲ್ಲಿ ಅಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಮತದಾರರಿಗೆ ಮಾತು ನೀಡಿದಂತೆ ಯಾವುದೇ ನಿಬಂಧನೆಯನ್ನು ಹಾಕದೇ ತನ್ನ ಐದು ಗ್ಯಾರೆಂಟಿಗಳನ್ನು ಜಾರಿಗೆ ತರಬೇಕೆಂದು ಬಿಜೆಪಿಯ ನಗರಾಧ್ಯಕ್ಷ ನವೀನ ಚಾಲುಕ್ಯ ಆಗ್ರಹಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಬಳಿಯಲ್ಲಿ ಇಂದು ಬಿಜೆಪಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಚುನಾವಣೆಯಲ್ಲಿ ಮತದಾರರಿಂದ ಮತವನ್ನು ಪಡೆಯುವ ಸಲುವಾಗಿ ಎಲ್ಲರಿಗೂ ಸಹಾ ಉಚಿತ ಎಂದು ತಿಳಿಸಿದ್ದು ಈಗ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿಯನ್ನು ನೀಡುವಾಗ ನಿಭಂಧನೆಗಳನ್ನು ಹಾಕುವುದು ಸರಿಯಲ್ಲ.

ಚುನಾವಣೆ ಪೂರ್ವದಲ್ಲಿಯೇ ಮತದಾರರಿಗೆ ತಿಳಿಸುವಾಗಲೇ ನಮ್ಮ ಗ್ಯಾರೆಂಟಿಗಳಿಗೆ ನಿಬಂಧನೆಗಳು ಇವೆ ಎಂಬುದನ್ನು ತಿಳಿಸಬೇಕಿತ್ತು ಎಂದು ಕಾಂಗ್ರೆಸ್ ಪಕ್ಷದ ಕಾರ್ಯ ವೈಖರಿಯನ್ನು ಟೀಕಿಸಿದರು.

ಮನೆಯ ಮಹಿಳೆಯರಿಗೆ 2000 ರೂ ಎಂದು ಹೇಳಿತ್ತು ಆದರೆ ಈಗ ಮನೆಯ ಮುಖ್ಯಸ್ಥೆಗೆ ಮಾತ್ರ ಎನ್ನಲಾಗುತ್ತಿದೆ. ಇದರಿಂದ ಮನೆಯಲ್ಲಿ ಗಲಾಟೆಗಳಾಗುತ್ತಿವೆ ಮನೆಯಲ್ಲಿ ಯಾರು ಯಜಮಾನಿ ಎಂದು
ಅತ್ತೇ-ಸೂಸೆಯ ನಡುವೆ ಕಿತ್ತಾಟ ಪ್ರಾರಂಭವಾಗಿದೆ. ಇದರಿಂದ ಮನೆಯಲ್ಲಿ ಶಾಂತಿಯ ವಾತಾವರಣ ಇಲ್ಲದಾಗಿದೆ.

ಇನ್ನೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಲಾಗಿತ್ತು ಆದರೆ ಈಗ ನೋಡಿದರೆ ಎರಡು ಮೂರು ತಿಂಗಳ ಆವರೇಜ್ ತೆಗೆದುಕೊಂಡು ಅದರ ಮೇಲೆ ನೀಡಲಾಗುತ್ತದೆ ಒಬ್ಬರಿಗೆ ಒಂದೇ ಮೀಟರ್ ಹಾಗೇ 200 ಮೇಲೆ ಬಂದರೆ ಪೂರ್ಣ ಹಣವನ್ನು ಕಟ್ಟಬೇಕೆನ್ನುವ ನಿಯಮವನ್ನು ತೆಗೆದು ಎಲ್ಲರಿಗೂ ಸಹಾ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವಂತೆ ಆಗ್ರಹಿಸಿದರು.

ನಿರುದ್ಯೋಗ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದವರು ಈಗ 2022-23ನೇ ಸಾಲಿನಲ್ಲಿ ಓದಿ ನಿರುದ್ಯೋಗಿಗಳಾದವರಿಗೆ ಮಾತ್ರ ಎನ್ನಲಾಗುತ್ತಿದೆ ಇದರಿಂದ ಈ ಹಿಂದೆ ನಿರುದ್ಯೋಗಿಗಳಾದವರಿಗೆ ಅನ್ಯಾಯವಾಗುತ್ತದೆ. ಇದರಿಂದ ಓದಿ ಕೆಲಸ ಸಿಗದೇ ಇದ್ದ ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗಿ ಭತ್ಯೆಯನ್ನು ಅವರಿಗೆ ಕೆಲಸ ಸಿಗುವವರೆಗೂ ಸಹಾ ನೀಡಬೇಕಿದೆ.

ಇನ್ನೂ ಸಾರಿಗೆ ವಿಷಯದಲ್ಲಿ ಎಲ್ಲಾ ಮಹಿಳೆಯರಿಗೂ ಸಹಾ ಯಾವುಧಾದರೂ ದಾಖಲೆಯನ್ನು ತೋರಿಸಿದರೆ ಸಾಕು ಅವರನ್ನು ಸಾರಿಗೆ ಇಲಾಖೆಯವರು ಎಲ್ಲಿಗೇ ಬೇಕಾದರೂ ಉಚಿತವಾಗಿ ಕರೆದುಕೊಂಡು ಹೋಗುವಂತೆ ಕಾರ್ಯವಾಗುವಂತೆ ಆದೇಶವನ್ನು ನೀಡಬೇಕೆಂದು ಸರ್ಕಾರವನ್ನು ನವೀನ್ ಚಾಲುಕ್ಯ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರೆಂಟಿಗಳನ್ನು ಮತದಾರರಿಗೆ ಯಾವುದೇ ನಿಬಂಧನೆ ಇಲ್ಲದೆ ಉಚಿತವಾಗಿ ನೀಡದಿದ್ದರೆ ಮುಂದಿನ ದಿನದಲ್ಲಿ ಬಿಜೆಪಿವತಿಯಿಂದ ಹೋರಾಟವನ್ನು ರಾಜ್ಯವ್ಯಾಪಿ ಹಮ್ಮಿಕೊಂಡು ಸಚಿವರು ಅವರ ಶಾಸಕರು ಎಲ್ಲಿಯೂ ಸಹಾ ಓಡಾಡದ ರೀತಿಯಲ್ಲಿ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ಧಾಪುರ, ಮಾಜಿ ಸದಸ್ಯೆಯಾದ ಶ್ರೀಮತಿ ರೇಖಾ, ಜಿಲ್ಲಾ ಉಪಾಧ್ಯಕ್ಷ ಸಂಪತ್, ರೈತ ಮೋರ್ಚಾ ರೈತ ಜಿಲ್ಲಾದ್ಯಕ್ಷ ವೆಂಕಟಶ್ ಯಾದವ್, ಮಾಜಿ ಜಿಲ್ಲಾ ಪೃಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ನಾಗರಾಜ್ ಬೇದ್ರೇ ಜಿಲ್ಲಾ ವಕ್ತಾರ, ಮಾದ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಜಿಲ್ಲಾ ಕೋಶಾಧ್ಯಕ್ಷ ಮಾಧುರಿ ಗಿರೀಶ್, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಬಿಜೆಪಿ ಮುಖಂಡರಾದ ಶಿವಣ್ಣಚಾರ್ ಯಶವಂತ ವೀರೇಶ್ ಜಾಲಿಕಟ್ಟೆ ನಾಗರಾಜ್ ಪಾಲಯ್ಯ, ಗೌರಣ್ಣ ಪರಶುರಾಮ್, ಸತ್ಯನಾರಾಯಣಚಾರ್, ಜಯ್ಯಣ್ಣ, ಶಿವಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!