ಬೆಂಗಳೂರು: ಜನ ನಿಜವಾಗಲೂ ಈ ಮಳೆಗೆ ಸುಸ್ತಾಗಿ ಹೋಗಿದ್ದಾರೆ. ಮುಂಗಾರು ಸಮಯದಲ್ಲಿ ಕೈಕೊಟ್ಟು ಬೆಳೆ ಫಸಲಿಗೆ ಬಂದಾಗ ಧೋ ಅಂತ ಸುರಿಯುತ್ತಿರುವ ಈ ಮಳೆಗೆ ರೈತರಂತು ಸಾಕಪ್ಪ ಸಾಕು ಎನ್ನುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಬಗ್ಗೆ ಇಂದಾದರೂ ನಿಲ್ಲುತ್ತೇನೊ ಅಂತ ಅದೆಷ್ಟೋ ಜನ ಮೋಡದತ್ತ ಕಣ್ಣು ಹಾಯಿಸುತ್ತಿದ್ದಾರೆ. ಆದ್ರೆ ಅದು ಸಾಧ್ಯವಿಲ್ಲ ಅಂತ ಹವಮಾನ ಇಲಾಖೆ ಮುನ್ಸೂಚನೆ ನೀಡುತ್ತಿದೆ.
ನಾಳೆಯಿಂದ ಮಳೆಯ ಪ್ರಮಾಣ ತಗ್ಗುವ ಸಾಧ್ಯತೆ ಮಾತ್ರ ಇದೆ. ಆದ್ರೆ ರಾಜ್ಯದೆಲ್ಲೆಡೆ ಇನ್ನು ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ಕೂಡ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಿದೆ. ಬೆಳಗ್ಗೆ ಸ್ವಲ್ಪ ಹೊತ್ತು ಮಾತ್ರ ಸೂರ್ಯನ ದರ್ಶನವಾಗಿದೆ. ಬಿಸಿಲು ನೋಡಿ ಇವತ್ತು ಮಳೆ ಬರಲ್ಲ ಎಂದುಕೊಂಡ ಕೆಲವೇ ಗಂಟೆಗಳಲ್ಲಿ ಎಲ್ಲೆಡೆ ಜೋರು ಮಳೆಯಾಗಿದೆ. ಮತ್ತೆ ಮೋಡ ಕವಿದ ವಾತಾವರಣವೇ ಎಲ್ಲೆಡೆ ಕಾಣುತ್ತಿದೆ. ಇದರ ನಡುವೆ ಇನ್ನು ಮೂರ್ನಾಲ್ಕು ದಿನ ಮಳೆಯಾಗುತ್ತೆ ಅಂದ್ರೆ ಜನರ ಸ್ಥಿತಿ ಆ ವರುಣರಾಯನಿಗೆ ಪ್ರೀತಿಯಾಗಬೇಕು.