ಅಕ್ರಮ ಕಾಮಗಾರಿ : ಸೋಮುಗುದ್ದು ಗ್ರಾಮಸ್ಥರಿಂದ ತನಿಖೆಗೆ ಒತ್ತಾಯ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಜನವರಿ. 13 : ತಾಲೂಕಿನ ಸೋಮುಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024-25 ನೇ ಸಾಲಿನ 15 ನೇ ಹಣಕಾಸನ ವಿವಿಧ ಕಾಮಗಾರಿಗಳಲ್ಲಿ ಅಕ್ರಮವಾಗಿರುವ ಬಗ್ಗೆ ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿ ಹಾಗೂ ಸೋಮುಗುದ್ದು ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಅವರಿಗೆ ಮನವಿ ಪತ್ರವನ್ನು ನೀಡಿ ಶೀಘ್ರ ತನಿಖೆ ನಡೆಸಿ ತಪಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

 

ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ತಾಲೂಕು ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಸಂಚಾಲಕ ನಾಗಭೂಷಣ್ ಮಾತನಾಡಿ. ಸೋಮುಗುದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2024 -25 ನೇ ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ 01 ಜುಲೈ 2024 ರಿಂದ 30 ಆಗಷ್ಟು 2024ರ ವರೆಗಿನ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ.

ಗ್ರಾಮ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ತನಿಖೆ ಮಾಡಿ ತಪಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ನಕಲಿ ಹೆಸರಿನ ಮತ್ತು ನಕಲಿ ಟಿನ್ ನಂಬರಿನ ದರ ಪಟ್ಟಿಗಳಾಗಿದ್ದು ಅಂಗಿಕೃತಗೊಂಡ ಉದ್ದೇಶದಿಂದ ಬಿಡ್ಡುದಾರನ ಏಜೆನ್ಸಿಗೆ ಟೆಂಡರ್ ನೀಡುವ ಉದ್ದೇಶದಿಂದ ಮಾಡಿರುವ ಅಕ್ರಮ ತನಿಖೆಯಾಗಬೇಕು. ನಕಲಿ ಕೊಟೇಶನ್ ಗಳನ್ನು ನೀಡಿ ಅಂಗಿಕೃತಗೊಂಡ ಬಿಡ್ಡು ದಾರನ ಏಜೆನ್ಸಿಗೆ ಪಾವತಿಸಿರುವ ಬಿಲ್ಲು ಮೊತ್ತವನ್ನು ವಾಪಸ್ ಪಡೆಯಬೇಕು.
ವಂಚನೆ ಪ್ರಕರಣದಡಿ ಮಕ್ಕದೊಮ್ಮೆ ದಾಖಲಿಸಬೇಕ 15 ದಿನಗಳವಾಗಿ ಕ್ರಮ ಮತ್ತು ತನಿಖೆ ಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಓ ಎಚ್. ಶಶಿಧರ್ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವರ ಬಗ್ಗೆ ತನಿಖೆ ನಡೆಸಲಾಗುವುದುಇನ್ನು 15 ದಿನ ಒಳಗಾಗಿ ತಪಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವಿಜಯಕುಮಾರ್, ಹೊನ್ನೂರಪ್ಪ ಮಾತನಾಡಿದರು. ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಪದಾದಿಕಾರಿಗಳು ಸಮಿತಿಯ ಸಹನಾ, ಶಿಲ್ಪ, ರಾಘವೇಂದ್ರ ,ನವೀನ್, ಕುಮಾರ್, ದಯಾನಂದ್, ಸಂತೋಷ್, ಕಲ್ಲೇಶ್, ವಿಶ್ವನಾಥ್, ಮಂಜುನಾಥ್, ರುದ್ರಮುನಿ ವೆಂಕಟೇಶ್, ನಾಗರಾಜ್ ನನ್ನಿವಾಳ, ನಾಗರಾಜ್ ದ್ಯಾವರನಹಳ್ಳಿ, ತಿಪ್ಪೇಸ್ವಾಮಿ‌ಸೇರಿದಂತೆ ಮಹಿಳೆಯರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *