ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇದಕ್ಕೆ ಬಳಕೆ ಮಾಡಿದ್ದ ಕರೆಂಟ್ ಅಕ್ರಮವಾಗಿತ್ತು ಎಂದು ವಿಡಿಯೋ ಸಮೇತ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಆ ವಿಡಿಯೋ ಆಧಾರದ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಕುಮಾರಸ್ವಾಮಿ ಅವರಿಗೆ ದಂಡ ಬಿದ್ದಿದೆ.
ಜಯನಗರ ಬೆಸ್ಕಾಂ ದಂಡ ವಿಧಿಸಿದೆ. ಕುಮಾರಸ್ವಾಮಿ ಅವರು ಬಳಕೆ ಮಾಡಿದ್ದ, ವಿದ್ಯುತ್ ಗೆ ದಂಡ ಹಾಕಿದೆ. ಬೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆಯನ್ನು ಲೆಕ್ಕ ಹಾಕಲಾಗಿದೆ. ಹತ್ತು ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆಯಾಗಿದೆ ಎಂಬುದನ್ನು ಲೆಕ್ಕ ಹಾಕಲಾಗಿದೆ. ಈ ಮೂಲಕ ಎರಡು ದಿನಗಳ ಕಾಲ ಎಷ್ಟು ವಿದ್ಯುತ್ ಬಳಕೆಯಾಗಿರಬಹುದೆಂದು ಲೆಕ್ಕ ಹಾಕಿ, ನಿನ್ನೆಯೇ ಅಧಿಕಾರಿಗಳು ವರದಿ ನೀಡಿದ್ದರು.
ಇದೀಗ ವರದಿ ಆಧರಿಸಿ, ಬೆಸ್ಕಾಂ ಇಲಾಖೆ 68 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟುವುದಕ್ಕೆ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಕಾಂಗ್ರೆಸ್ ನವರ ಟ್ವೀಟ್ ಗೆ ಕುಮಾರಸ್ವಾಮಿ ಅವರು ಕೂಡ ತಿರುಗೇಟು ನೀಡಿದ್ದರು.