ಭ್ರಷ್ಟ ಕಾಂಗ್ರೆಸ್ ಎಂಬುದಕ್ಕೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣ ಸಾಕ್ಷಿ : ಬಿಜೆಪಿ

1 Min Read

 

ಬೆಂಗಳೂರು: ಬಿಜೆಪಿ ಸರ್ಕಾರದ ಮೇಲಿರುವ 40% ಕಮಿಷನ್ ಆರೋಪದ ಬಗ್ಗೆ ಇಂದು ಕಾಂಗ್ರೆಸ್ ನಾಯಕರು ಸದನದಲ್ಲಿ ಚರ್ಚಿಸಲು ಹೊರಟಿದ್ದಾರೆ. ಈ ಬೆನ್ನಲ್ಲೆ ಬಿಜೆಪಿ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್‌ ಸರ್ಕಾರ 100% ಕಮಿಷನ್‌ ಸರ್ಕಾರವಾಗಿತ್ತು ಎನ್ನುವುದಕ್ಕೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣವೇ ಸಾಕ್ಷಿ. ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಅವರ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5 ರಿಂದ 10 ಲಕ್ಷ ಡೀಲ್‌ ನಡೆದಿದೆ. ಕಾಂಗ್ರೆಸ್ಸಿಗರೇ, ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಿ ನೀವು ಎಷ್ಟು % ಕಮಿಷನ್‌ ಗಳಿಸಿದ್ದೀರಿ?

 

ಕಾಂಗ್ರೆಸ್‌ ಸರ್ಕಾರದ ಪ್ರಭಾವಿ ಮಂತ್ರಿಗಳ ಶ್ರೀರಕ್ಷೆ ಇಲ್ಲದೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ ಜಾಲ ರಾಜ್ಯವ್ಯಾಪಿ ಪಸರಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿತರಾಗಿದ್ದಕ್ಕಿಂತ ಹೆಚ್ಚಾಗಿ ಹೈಕಮಾಂಡ್‌ ಗೆ ಕಪ್ಪ ಕಾಣಿಕೆ ನೀಡುವುದರಲ್ಲಿ ಮಗ್ನವಾಗಿತ್ತು.

ಒಂದೆಡೆಯಲ್ಲಿ ಇ‌.ಡಿ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್, ಮತ್ತೊಂದೆಡೆಯಲ್ಲಿ ಸದನದಲ್ಲಿ ಭ್ರಷ್ಟಾಚಾರ ಕುರಿತಂತೆ ಮುಜುಗರಕ್ಕೆ ಒಳಗಾದ ಸಿದ್ದರಾಮಯ್ಯ, ಈಗ
ರಾಜ್ಯದ ಜನರ ಮುಂದೆ ಇವರ ನಾಟಕಕ್ಕೆ ತೆರೆ ಬಿದ್ದಿದೆ. ಪಕ್ಷದ ಅಧ್ಯಕ್ಷರೇ ಬೇಲ್ ಮೇಲೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಇವರಿಬ್ಬರು ಭ್ರಷ್ಟಾಚಾರದ ಮೂಲಕ ಘನತೆ ಹೆಚ್ಚಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *