ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188
ಸುದ್ದಿಒನ್, ಚಳ್ಳಕೆರೆ, ಜನವರಿ. 13 :
ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೋಮಗುದ್ದು ಗ್ರಾಮದ ಮಹಿಳೆಯರು ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಮಕ್ಕಳು, ಮಹಿಳೆಯರರು ನೆಮ್ಮದಿಯಿಂದ ಜೀವನ ಮಾಡಲು ಕಷ್ಟವಾಗುತ್ತಿದೆ .ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳು ಸಹ ಮಧ್ಯ ವ್ಯಸನಿಗಳಾಗುತ್ತಿದ್ದು, ಮದ್ಯ ಕುಡಿದು ಬಂದಂತಹ ಮಧ್ಯಪ್ರಿಯರು ಗ್ರಾಮಗಳಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ .ಆದರಿಂದ ಅಕ್ರಮ ಮದ್ಯ ಮಾರಾಟದ ಅಂಗಡಿಗಳ ವಿರುದ್ಧ ಕ್ರಮ ಕೈಕೊಂಡು ಜನಸಾಮಾನ್ಯರ ದೃಷ್ಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲಿನ ನಂಬಿಕೆಯನ್ನು ಇಮ್ಮಡಿ ಗೂಳಿಸುವಂತಹ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಅಬಕಾರಿ ಅಧಿಕಾರಿಗಳಾದ ತಿಪ್ಪಯ್ಯ ಹಾಗೂ ರಂಗಸ್ವಾಮಿ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಪಾಪಕ್ಕ, ಸೌಮ್ಯ ದ್ಯಾಮಕ್ಕ, ಮಂಜಮ್ಮ, ರೇಣುಕಮ್ಮ, ಭಾಗ್ಯಮ್ಮ, ಶಾಂತಮ್ಮ, ಶಿವರುದ್ರಮ್ಮ, ತಿಪ್ಪಮ್ಮ, ಹನುಮಕ್ಕ ,ಮಲ್ಲಕ್ಕ, ಕೆಂಚಮ್ಮ, ರತ್ನಮ್ಮ, ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಸದಸ್ಯರು ಇದ್ದರು.