ಚಳ್ಳಕೆರೆಯಲ್ಲಿ ಅಕ್ರಮ ಮದ್ಯ ಸಾಗಾಟ : ಮದ್ಯ ವಶ

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 29 : ನಗರದಿಂದ ವೀರದಿಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 22500 ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಿಕರಾದ ಸಿ.ನಾಗರಾಜು ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ-90 ಮಿಲಿಯ 60 ಟೆಟ್ರಾ ಪ್ಯಾಕ್ ಗಳು ಒಟ್ಟು-5.400 ಲೀಟರ್ ಮಧ್ಯವನ್ನು ಚಿಕ್ಕಿ ಉಳ್ಳಾರ್ತಿ ಬೋರಯ್ಯ ಎನ್ನುವ ವ್ಯಕ್ತಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಅಬಕಾರಿ ಅಧಿಕಾರಿಗಳು ಮದ್ಯವನ್ನ ವಶಕ್ಕೆ ಪಡೆದು ಸದರಿ ಅರೋಪಿತನಿಗೆ ನೋಟಿಸ್ ನೀಡಿ ಕಛೇರಿಗೆ ಹಾಜರಾಗುವ ಸೂಚನೆಯೊಂದಿಗೆ ಬಿಡುಗಡೆಗೊಳಿಸಿದೆ.

ಕಾರ್ಯಾಚರಣೆ ವೇಳೆ ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜ್, ಟಿ. ರಂಗಸ್ವಾಮಿ, ಡಿ.ಟಿ.ತಿಪ್ಪಯ್ಯ ಉಪ ನಿರೀಕ್ಷಕರು, ಡಿ ಟಿ. ತಿಪ್ಪಯ್ಯ ಅಬಕಾರಿ ಪೇದೆಗಳಾದ , ದರ್ಶನ್ ಕುಮಾರ್ ಇದ್ದರು.

Leave a Reply

Your email address will not be published. Required fields are marked *

error: Content is protected !!