Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತದಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ : 2 ಲಕ್ಷ ಕೋಟಿ ತೆರಿಗೆ ನಷ್ಟ : ಎಷ್ಟು ಕೋಟಿ ಮಂದಿ ಭಾರತೀಯರು ಪಾಲ್ಗೊಳ್ಳುತ್ತಾರೆ ? ಇಲ್ಲಿದೆ ಮಾಹಿತಿ….!

Facebook
Twitter
Telegram
WhatsApp

 

ನವದೆಹಲಿ : 2023ರ ಏಕದಿನ ವಿಶ್ವಕಪ್ ಟೂರ್ನಿ ರಂಗೇರುತ್ತಿರುವಂತೆಯೇ ಮತ್ತೊಂದೆಡೆ ಅಕ್ರಮ ಬೆಟ್ಟಿಂಗ್ ದಂಧೆಯೂ ವಿಪರೀತವಾಗಿ ನಡೆಯುತ್ತಿದೆ. ‘ಥಿಂಕ್ ಚೇಂಜ್ ಫೋರಮ್’ (ಟಿಸಿಎಫ್) ವರದಿಯ ಪ್ರಕಾರ, ಅನಧಿಕೃತವಾಗಿ ನಡೆಸುತ್ತಿರುವ ದೊಡ್ಡ ಪ್ರಮಾಣದ ಬೆಟ್ಟಿಂಗ್ ಚಟುವಟಿಕೆಗಳಿಂದಾಗಿ ಭಾರತವು ವಾರ್ಷಿಕವಾಗಿ 2 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಆದಾಯವನ್ನು ಕಳೆದುಕೊಳ್ಳುತ್ತಿದೆ. ಭಾರತದಿಂದ ಪ್ರತಿ ವರ್ಷ ರೂ.8,20,000 ಕೋಟಿ ಅಕ್ರಮ ಕ್ರೀಡಾ ಬೆಟ್ಟಿಂಗ್ ಮಾರುಕಟ್ಟೆಗೆ ಬರುತ್ತಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಪ್ರಸ್ತುತ ಶೇಕಡಾ 28 ರ ಜಿಎಸ್‌ಟಿ ದರದ ಪ್ರಕಾರ, ಈ ಮೊತ್ತದಲ್ಲಿ ಭಾರತವು ವಾರ್ಷಿಕವಾಗಿ ರೂ.2,29,600 ಕೋಟಿಯನ್ನು ಕಳೆದುಕೊಳ್ಳುತ್ತಿದೆ. ಈ ರೀತಿಯ ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳನ್ನು ತಡೆಗಟ್ಟಲು ಹೊಸ ಜಿಎಸ್‌ಟಿ ಆಡಳಿತವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಲಹೆ ನೀಡಿದೆ. ಅಕ್ರಮ ಬೆಟ್ಟಿಂಗ್ ಸಂಸ್ಥೆಗಳ ಚಟುವಟಿಕೆಗಳನ್ನು ಗುರುತಿಸಲು ಮತ್ತು ಅವುಗಳನ್ನು ಭಾರತದಲ್ಲಿ ನೋಂದಾಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಾರ್ಯಪಡೆಯನ್ನು ರಚಿಸಬೇಕು ಎಂದು ಅದು ಹೇಳಿದೆ. ಹೀಗಾಗಿ, ದೊಡ್ಡ ಮೊತ್ತದ ಬೆಟ್ಟಿಂಗ್‌ಗೆ ಹಣ ಭಾರತದಿಂದ ಹೊರಗೆ ಹೋಗುವುದನ್ನು ತಡೆಯಬಹುದು ಎಂದು ಹೇಳಿದೆ.

ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತಷ್ಟು ಆದಾಯ ನಷ್ಟವಾಗಲಿದೆ ಎಂದು ವರದಿ ಎಚ್ಚರಿಸಿದೆ. ಹೊಸ GST ಆಡಳಿತದೊಂದಿಗೆ, ಕಾನೂನು ಗೇಮಿಂಗ್ ಮಾರುಕಟ್ಟೆಯು ಅಕ್ರಮ ಬೆಟ್ಟಿಂಗ್ ಕಂಪನಿಗಳ ಹೆಚ್ಚಿನ ಹಣವನ್ನು ಗಳಿಸುತ್ತಿವೆ. ಇದರಿಂದಾಗಿ ಹೆಚ್ಚಿನ ತೆರಿಗೆ ನಷ್ಟವಾಗುತ್ತದೆ ಎಂದು ಅದು ವಿವರಿಸಿದೆ. ಇದು ಐಪಿಎಲ್‌ನಲ್ಲೂ ದೊಡ್ಡ ಪ್ರಮಾಣದ ಬೆಟ್ಟಿಂಗ್ ಚಟುವಟಿಕೆಗಳ ನಡೆಯುತ್ತಿವೆ ಎಂದು ತಿಳಿಸಿದೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ 14 ಕೋಟಿ ಜನರು ಬೆಟ್ಟಿಂಗ್ ಮತ್ತು ಗೇಮಿಂಗ್‌ನಲ್ಲಿ ಭಾಗವಹಿಸುತ್ತಾರೆ.  ಆದರೆ ಐಪಿಎಲ್ ಸಮಯದಲ್ಲಿ ಈ ಸಂಖ್ಯೆ 37 ಕೋಟಿಗೆ ಏರುತ್ತದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಬೆಟ್ಟಿಂಗ್ ಮತ್ತು ಜೂಜಿನ ವಹಿವಾಟುಗಳ ಮೇಲಿನ ನಿಷೇಧ ವಿಧಿಸಿರುವುದರಿಂದ ಭಾರತದ ಒಳಗೆ ಮತ್ತು ಹೊರಗೆ ಹಣದ ಅಕ್ರಮ ಸಾಗಾಣಿಕೆಗೆ ರಹಸ್ಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಅದು ವಿವರಿಸಿದೆ.

ಹವಾಲಾ,‌ಕ್ರಿಪ್ಟೋ ಕರೆನ್ಸಿಗಳು ಮತ್ತು ಹಣದ ಚಲನೆಯನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಸ್ಥಿರತೆಗೆ ಸವಾಲುಗಳನ್ನು ಒಡ್ಡುತ್ತಿವೆ.

ಕಳ್ಳಸಾಗಣೆಯಾಗುತ್ತಿರುವ ನಿಧಿಯು ಕಾನೂನುಬಾಹಿರ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕರವಾದ ಕ್ರಮಗಳ ಮೂಲವಾಗಬಹುದು ಎಂದು ಅದು ಕಳವಳ ವ್ಯಕ್ತಪಡಿಸಿದೆ. ಸುಮಾರು 75 ಕ್ಕೂ  ಬೆಟ್ಟಿಂಗ್ ಮತ್ತು ಜೂಜಾಟದ ಆನ್‌ಲೈನ್ ವೆಬ್ಸೈಟ್ ಗಳು ಭಾರತೀಯರನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿ ಹೇಳುತ್ತದೆ. ಭಾರತೀಯ ಬಳಕೆದಾರರನ್ನು ಆಕರ್ಷಿಸಲು ಪ್ರಸಿದ್ಧ ಬಾಲಿವುಡ್ ನಟರು ಮತ್ತು ಕ್ರೀಡಾಪಟುಗಳನ್ನು ಬ್ರಾಂಡ್ ಅಂಬಾಸಿಡರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!