ಮಂಗಳೂರು: ಕಳೆದ ವರ್ಷ ಶುರುವಾದ ಹಿಜಾಬ್ ವಿವಾದ ಇನ್ನು ಮುಗಿದಿಲ್ಲ. ಕೋರ್ಟ್ ನೀಡಿದ ತೀರ್ಪಿಗೂ ಕೆಲ ವಿದ್ಯಾರ್ಥಿಗಳು ಡೋಂಟ್ ಕೇರ್ ಎಂದಿದ್ದಾರೆ. ಹಿಜಾಬ್ ಧರಿಸಿಯೇ ಕಾಲೇಜಿನ ಅಂಗಳಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಆ ಆರು ವಿದ್ಯಾರ್ಥಿನಿಯರು ಶಾಸಕ ಯು ಟಿ ಖಾದರ್ ಅವರನ್ನು ಭೇಟಿ ಮಾಡಿ ಕಿಡಿಕಾರಿದ್ದರು. ಇದೀಗ ಯು ಟಿ ಖಾದರ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಯು ಟಿ ಖಾದರ್, ಹಿಜಾಬ್ ಗಾಗಿ ಪಟ್ಟು ಹಿಡಿದು ಕುಳಿತಿದ್ದಿರಲ್ಲ, ನೀವೊಮ್ಮೆ ವಿದೇಶಕ್ಕೆ ಹೋಗಿ ನೋಡಿ. ಇಲ್ಲಿ ಹುಲಿ ರೀತಿಯಲ್ಲಿ ಇರುತ್ತೀರಲ್ಲ ಅಲ್ಲಿ ಬೆಕ್ಕಿನ ರೀತಿ ಆಗುತ್ತೀರಿ. ನಮ್ಮ ದೇಶದ ಕಾನೂನಿಗೆ ಗೌರವ ಕೊಡುವುದನ್ನು ಕಲಿತು ಕೊಳ್ಳಿ ಎಂದಿದ್ದಾರೆ.
ನನಗಿಲ್ಲಿ ಅನ್ಯಾಯವಾಗ್ತಿದೆ ಎಂದು ಡಿಸಿ ಹತ್ರ ಎಲ್ಲಾ ಹೋಗುತ್ತಾರೆ. ಕೋರ್ಟ್ ಕೊಟ್ಟಿರುವ ತೀರ್ಪನ್ನು ಮೊದಲು ಗೌರವಿಸಿ. ಸಾವಿರಾರು ಮಕ್ಕಳು ಕಲಿತಾ ಇದ್ದಾರೆ. ಹತ್ತು ಜನಕ್ಕಾಗಿ ಎಲ್ಲರ ಮನಸ್ಸನ್ನು ಯಾಕೆ ಕದಡಬೇಕು. ಆ ಹತ್ತು ಜನ ಕೋರ್ಟ್ ಗೆ ಹೋಗಲಿ. ವಿದೇಶಕ್ಕೆ ಹೋಗಲಿ ಅವರು. ಈ ದೇಶದ ಸೌಲಭ್ಯ ಮತ್ತು ಅವಕಾಶಗಳು ಏನು ಎಂಬುದು ಗೊತ್ತಾಗಬೇಕು ಎಂದರೆ ಸೌದಿ ಮತ್ತು ಪಾಕಿಸ್ತಾನಕ್ಕೆ ಹೋಗಲಿ. ಇಲ್ಲಿ ಮಾತನಾಡುವುದಕ್ಕೆ, ಡಿಸಿ ಬಳಿ ಹೋಗುವುದಕ್ಕೆ ಅವಕಾಶವಿದೆ. ಅಲ್ಲಿ ಹೋಗಿ ಮಾತನಾಡಲಿ ನೋಡೋಣಾ ಎಂದು ಆ ಆರು ವಿದ್ಯಾರ್ಥಿನಿಯರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.