ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಪಾಸಿಟಿವ್ ಆಗಿದ್ದು ಐದು ಗ್ಯಾರಂಟಿ ಯೋಜನೆಗಳು. ಈಗ ಪಕ್ಷ ಅಧಿಕಾರಕ್ಕೂ ಬಂದಿದೆ, ಗ್ಯಾರಂಟಿಗಳ ಬಗ್ಗೆಯೂ ಘೋಷಣೆ ಮಾಡಿದೆ. ಆದರೆ ಅದರ ಉಪಯೋಗ ಪಡೆಯಬೇಕು ಅಂದ್ರೆ ಕೆಲವೊಂದು ನಿಯಮಗಳನ್ನು ಫಾಲೋ ಮಾಡಲೇಬೇಕಾಗಿದೆ.
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಫ್ರೀ ಎಂಬುದನ್ನು ಈಗಾಗಲೇ ಘೋಷಣೆ ಮಾಡಿದೆ. ಹೇಗೆ ಎಂಬ ನಿಯಮಗಳನ್ನು ತಿಳಿಸಿದೆ. ಇದರ ನಡುವೆ ಉಚಿತ ವಿದ್ಯುತ್ ಪಡೆಯಬೇಕು ಎಂದರೆ ಅರ್ಜಿಯನ್ನು ಸಲ್ಲಿಸಲೇಬೇಕೆಂಬುದನ್ನು ತಿಳಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ವಿದ್ಯುತ್ ಉಚಿತವಾಗಿ ಪಡೆಯಬೇಕು ಎಂದರೆ ಇದೀಗ ಸೇವಾ ಸಿಂಧು ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಿದೆ.
ಕಾಂಗ್ರೆಸ್ ನ ಐದು ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯ ಫಲಾನುಭವಿಗಳಾಗಬೇಕಾದರೆ ಇಲ್ಲ ಆನ್ಲೈನ್ ಮೂಲಕವಾದರೂ ಅರ್ಜಿ ಸಲ್ಲಿಸಬೇಕು. ಇಲ್ಲವಾದರೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಅರ್ಜಿ ಸಲ್ಲಿಸಿದವರಿಗೆ ಮಾತ್ರ 200 ಉಚಿತವಾಗಿ ಸಿಗಲಿದೆ. ಹೆಚ್ಚಿನ ಮಾಹಿತಿಯನ್ನು ಸೇವಾ ಸಿಂಧು ಕಚೇರಿ ಮೂಲಕವೇ ಪಡೆಯಬೇಕಾಗಿದೆ.