ಮುದ್ದೆಬಿಹಾಳ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದ ಮೇಲೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಬ್ಬರ ಮೇಲೊಬ್ಬರು ಆರೋಪ – ಪ್ರತ್ಯಾರೋಪ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತಿಚೆಗೆ ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆಯನ್ನು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದಾರೆ. ಸುಮ್ಮನೆ ಇರದೆ ಇದ್ದರೆ ನನ್ನ ನೇತೃತ್ವದ ಮೈತ್ರಿ ಸರ್ಕಾವನ್ನು ಕೆಡವಲು, ಧರ್ಮಸ್ಥಳದ ಸಿದ್ಧವನದಲ್ಲಿ ನಡೆದ ಷಡ್ಯಂತ್ರವನ್ನು ಬಾಯ್ಬಿಡಬೇಕಾಗುತ್ತದೆ. ನಮ್ಮ ಬಳಿ ನಿರಂತರವಾಗಿ ಕಷ್ಟ ಹೇಳಿಕೊಂಡು ಜನ ಬರುತ್ತಾರೆ. ಸುಮ್ಮನೆ ಏನೇನೋ ಹೇಳಬೇಡಿ.
ಮುಖ್ಯಮಂತ್ರಿ ಆಸೆಗೋಸ್ಕರ ಪಕ್ಷ ಬಿಟ್ಟು ಹೋಗಿದ್ದು ನಿಮಗೆ ನೆನಪಿದೆಯಾ..? ನಿಮ್ಮಿಂದ ನಾನು ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ. ಅವರ ಸಿದ್ಧಾಂತವನ್ನು ಗಾಳಿಗೆ ತೂರಿ, ಸಿಎಂ ಖುರ್ಚಿ ಬೇಕು ಅಂತ ಹೋದವರು ಓಡಿದವರು ಯಾರು..? ನಿಮ್ಮ ಯೋಗ್ಯತೆ ಏನು ಅಂತ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.