ಇದೊಂದು ರೀಲ್ಸ್ ಮಾಡಿದ್ರೆ ಸರ್ಕಾರ ನಿಮ್ಗೆ ಕೊಡುತ್ತೆ 15 ಸಾವಿರ..!

1 Min Read

ಈಗಂತೂ ಸೋಷಿಯಲ್‌ ಮೀಡಿಯಾ ಸಿಕ್ಕಾಪಟ್ಟೆ ಟ್ರೆಂಡಿಯಾಗಿದೆ. ಯಾರೂ ಕೂಡ ಸೋಷಿಯಲ್ ಮೀಡಿಯಾ ಬಳಸಲ್ಲ ಅಂತ ಹೇಳುವಂತಿಲ್ಲ. ರೀಲ್ಸ್ ಮಾಡುವವರಿಗೂ ಸರ್ಕಾರ ಹಣ ಕೊಡುವುದಕ್ಕೆ ಮುಂದಾಗಿದೆ. ಆದ್ರೆ ಯಾವ ಥರ ರೀಲ್ಸ್ ಮಾಡಬೇಕು..? ಎಷ್ಟು ಹಣ ಸಿಗಲಿದೆ ಎಂಬೆಲ್ಲಾ ಮಾಹಿತಿ ಇಲ್ಲಿದೆ.

ಪ್ರಧಾನಿ‌ ನರೇಂದ್ರ ಅವರ ಸರ್ಕಾರವೂ ಜುಲೈ 1, 2015 ರಂದು ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭ ಮಾಡಿತ್ತು. ಈ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ 10 ವರ್ಷಗಳು ತುಂಬಿದೆ. ಹೀಗಾಗಿ ಅದನ್ನ ಸೆಲೆಬ್ರೇಟ್ ಮಾಡುವುದಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿದೆ. ಈ ಸ್ಪರ್ಧೆಯು ಆಗಸ್ಟ್ 1ರವರೆಗೂ ಚಾಲ್ತಿಯಲ್ಲಿರಲಿದೆ. ಹಾಗಾದ್ರೆ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅಂದ್ರೆ ಏನು ಮಾಡಬೇಕು..? ಹೇಗೆ ಎಂಬೆಲ್ಲಾ ಮಾಹಿತಿ ಇಲ್ಲಿದೆ.

ನೀವೂ ನಿಮ್ಮ ಪೇಜ್ ಗಳಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಸಂಬಂಧಿಸಿದಂತ ಸೃಜನಶೀಲ ರೀಲ್ಸ್ ಗಳನ್ನ ಹಂಚಿಕೊಳ್ಳಬೇಕು. ಈ ಸ್ಪರ್ಧೆಯ ಮೂಲಕ ಡಿಜಿಟಲ್ ಇಂಡಿಯಾ ಸಾಮಾನ್ಯ ಜನರ ಜೀವನದಲ್ಲಿ ಯಾವ ಬದಲಾವಣೆಗಳನ್ನು ತಂದಿದೆ ಎಂಬುದನ್ನು ನಾವೂ ತೋರಿಸಬೇಕಾಗಿದೆ. ಯುಪಿಐ ಪಾವತಿಗಳನ್ನು ಹೇಗೆ ಸುಲಭಗೊಳಿಸಿತು. ಆನ್ಲೈನ್ ಶಿಕ್ಷಣ ಹೇಗೆ ಸಾಧ್ಯವಾಯಿತು, ಡಿಜಿಲಾಕರ್ ಅಥವಾ ಇ ಆಸ್ಪತ್ರೆ ನಿಮ್ಮ ಜೀವನವನ್ನು ಬದಲಾಯಿಸಿದ ಯಾವುದೇ ಡಿಜಿಟಲ್ ಸೇವೆಯಿಂದ ನೀವೂ ಯಾವ ಪ್ರಯೋಜನಗಳನ್ನು ಪಡೆದುಕೊಂಡಿದ್ದೀರಿ ಎಂಬುದರ ಕುರಿತು ನಿಮ್ಮ ಅನುಭವಗಳನ್ನು ವಿಡಿಯೋ ಹಂಚಿಕೊಳ್ಳಬೇಕು.

ಈ ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸುವ 100ಕ್ಕೂ ಹೆಚ್ಚು ಜನರಿಗೆ ಬಹುಮಾನ ಸಿಗಲಿದೆ. ಅದರಲ್ಲಿ 10 ಜನಕ್ಕೆ 15 ಸಾವುರ, 25 ಜನರಿಗೆ 10 ಸಾವಿರ ಹಾಗೂ 50 ಜನರಿಗೆ 5 ಸಾವಿರ ಹಣ ನೀಡಲಿದೆ. ಕಂಟೆಂಟ್ ಫ್ರೆಶ್ ಆಗಿನೆ ಇರಬೇಕು. https://innovateindia.mygov.in ವೆಬ್ಸೈಟ್ ಗೆ ಹೋಗಿ ಅಪ್ಲೋಡ್ ಮಾಡಬೇಕು.

Share This Article
Leave a Comment

Leave a Reply

Your email address will not be published. Required fields are marked *