ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ನಿಮಗೆ ತಾಕತ್ತಿದ್ದರೆ ಅವನನ್ನ ಕೊಲ್ಲಿ ಎಂದಿದ್ದಾರೆ.
ನವಾಬ್ ಮಲಿಕ್ ರಾಜೀನಾಮೆಗೆ ಒತ್ತಾಯಿಸಿ ಮಹಾರಾಷ್ಟ್ರ ವಿಧಾನಸಭೆಯ ಹೊರಗೆ ಬಿಜೆಪಿ ಶಾಸಕರು ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, ಅಫ್ಜಲ್ ಗುರು ಮತ್ತು ಭಯೋತ್ಪಾದಕ ಬುರ್ಹಾನ್ ವಾನಿ ಬಗ್ಗೆ ಸಹಾನುಭೂತಿ ಹೊಂದಿರುವ ಮೆಹಬೂಬಾ ಮುಫ್ತಿಯನ್ನು ಕೇಂದ್ರ ಸರ್ಕಾರ ಏಕೆ ಬೆಂಬಲಿಸಿತು?.
ಆಯ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ದಾವೂದ್ ಇಬ್ರಾಹಿಂ ಜೊತೆ ಹಲವು ವರ್ಷಗಳ ಕಾಲ ಸಂಪರ್ಕ ಹೊಂದಿದ್ದರೆ ಕೇಂದ್ರ ಸಂಸ್ಥೆಗಳು ಏನು ಮಾಡುತ್ತಿತ್ತು? ಎಂದು ನವಾಬ್ ಮಲಿಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನೀವು ನನ್ನ ಕುಟುಂಬದ ಮೇಲೆ ಹಲ್ಲೆ ನಡೆಸಿ, ನನ್ನನ್ನು ಜೈಲಿಗೆ ಹಾಕಲು ಬಯಸುತ್ತಿರುವ ರೀತಿಯನ್ನೆಲ್ಲ ಬಯಲಿಗೆಳೆದು ಏನು ಪ್ರಯೋಜನ? ಕೋರ್ಟ್ ಸಾಕ್ಷಿ ನೋಡಿ ತೀರ್ಮಾನಿಸುತ್ತದೆ. ನನ್ನನ್ನು ಜೈಲಿಗೆ ಬೇಕಾದರೂ ಹಾಕಿ. “ನೀವು ಅಧಿಕಾರಕ್ಕೆ ಬರಬೇಕಾದರೆ ಅಧಿಕಾರಕ್ಕೆ ಬನ್ನಿ. ಆದರೆ ಅಧಿಕಾರಕ್ಕೆ ಬರಲು ಈ ಎಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.