ಬೆಂಗಳೂರು: ಇಂದು ವಿಧಾನಸಭಾ ಅಧಿವೇಶನದಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಅದರಲ್ಲಿ ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ್ ದಡೇಸಗೂರು ವಿರುದ್ಧ ಕೇಳಿ ಬಂದ ಆರೋಪವೂ ಒಂದಾಗಿದೆ. ಅದಕ್ಕೆ ದಡೇಸಗೂರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ದಡೇಸಗೂರು, ಅಧಿವೇಶನ ಮುಗಿದ ಮೇಲೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ನನಗೂ ಆ ವಿಡಿಯೋಗು ಯಾವುದೇ ಸಂಬಂಧವಿಲ್ಲ. ಇನ್ನೂ ಬಹಳ ವಿಡಿಯೋ ಇದ್ದಾವೆ ಅಂತ ಹೇಳಿದ್ದಾರಲ್ಲ, ತಡ ಮಾಡದೆ ಆದಷ್ಟು ಬೇಗ ಆ ವಿಡಿಯೋಗಳನ್ನು ತಂದು ಕೊಡಲಿ. ಧೈರ್ಯ ಇದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಿ ಎದುರಿಸಲಿ ಎಂದಿದ್ದಾರೆ.
ನಿವೃತ್ತ ಕಾನ್ಸ್ಟೇಬಲ್ ಪರಸಪ್ಪನ ಮಗನಿಗೆ ಪೋಸ್ಟ್ ಕೊಡಿಸುತ್ತೀನಿ ಅಂತ ಹೇಳಿ ಅವರ ಬಳಿಯೇ 15 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪವನ್ನು ದಡೇಸಗೂರು ಅವರು ಎದುರಿಸುತ್ತಿದ್ದರು. ಆ ಸಂಬಂಧ ಆ ಹಣ ಸರ್ಕಾರಕ್ಕೆ ತಲುಪಿದೆ ಎಂದು ಹೇಳಿದ ಆಡಿಯೋ ಕೂಡ ವೈರಲ್ ಆಗಿತ್ತು. ನಿನ್ನೆ ಕಾಂಗ್ರೆಸ್ ನಾಯಕರು ಅದರ ವಿಡಿಯೋವನ್ನು ರಿಲೀಸ್ ಮಾಡಿದ್ದರು.
============.