ಹುಬ್ಬಳ್ಳಿ: ಕೆಲವೊಂದು ಸಂಘಟನೆಗಳ ಬ್ಯಾನ್ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಾಡೋಕೆ ಧಮ್ಮಿದ್ದರೆ ಮಾಡಿ, ಬೇಡ ಎಂದವರು ಯಾರು. ಯಾವ್ಯಾವು ಸಮಾಜದಲ್ಲಿ ಶಾಂತಿ ಕದಡುವಂತ ಸಂಘಗಳಿದ್ದಾವೆ ಅವುಗಳನ್ನು ಮಾಡಿ. ಎಡಿಪಿಐ, ಆರ್ಎಸ್ಎಸ್, ಭಜರಂಗದಳ ಮಾಡಿ ಎಲ್ಲವನ್ನು. ನಂದೇನು ತಕರಾರಿಲ್ಲ. ನೀವೂ ಕೂಸು ಜಿಗುಟುವುದು ತೊಟ್ಲನ್ನು ತೂಗುವ ಕೆಲಸ ಮಾಡಬಾರದು.
ಮೌಲ್ವಿಗಳ ಬಗ್ಗೆ ತನಿಖೆ ಮಾಡಲು ಹೊರಡಿರುವ ಸರ್ಕಾರದ ಬಗ್ಗೆ ಮಾತನಾಡಿ, ಯಾರೋ ಒಬ್ಬ ತಪ್ಪು ಮಾಡಿದ ಎಂದು ಹೇಳಿದರೆ ಇಡೀ ಮೌಲ್ವಿಗಳೆಲ್ಲ ತಪ್ಪು ಮಾಡಿದ್ದಾರೆ ಅಂತ ಅಲ್ಲ. ಅವರು ಮೌಲ್ವಿನ ಇಲ್ಲವ ಎಂಬುದು ನನಗೆ ಗೊತ್ತಿಲ್ಲ. ಆದ್ದರಿಂದ ಇನ್ನಷ್ಟು ಕೆಸೆರೆರಚುವ ಕೆಲಸ ಮಾಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಲು ಏನು ಬೇಕೋ ಅದನ್ನು ಮಾಡಬೇಕು. ಶಾಂತಿ ಕದಡುವಂತ ಕೆಲಸವಾಗಬಾರದು.
ಹುಬ್ಬಳ್ಳಿ ಗಲಭೆ ಬಗ್ಗೆ ಮಾತನಾಡಿ, ಯಾರೆ ತಪ್ಪು ಮಾಡಿರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಶಿಕ್ಷೆಯಾಗಬೇಕು. ನಿರಪರಾಧಿ ಮೇಲೆ ಕ್ರಮ ತೆಗೆದುಕೊಳ್ಳಬಾರದು. ಅವರ ಮೇಲೆ ಕ್ರಮ ತೆಗೆದುಕೊಳ್ಳಬಾರದು ಅಷ್ಟೇ. 40% ಸರ್ಕಾರವನ್ನು ಕಿತ್ತಾಕಿ ಅಂತ ಹೇಳ್ತಾ ಇದ್ದೀವಿ. ಅದು ಜನತೆಗೆ ಬಿಟ್ಟಿದ್ದು ಎಂದು ಬಿಜೆಪಿ ಮೇಲೆ ಕಿಡಿಕಾರಿದ್ದಾರೆ.