Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಲಿಂಗಾಯತರನ್ನ ಎದುರಾಕಿಕೊಂಡರೆ ಅಧಿಕಾರ ಮಾಡೋದಕ್ಕೆ ಆಗಲ್ಲ ; ಶಾಮನೂರು ಹೇಳಿಕೆಗೆ ಸಿದ್ದರಾಮಯ್ಯ ಏನಂದ್ರು..?

---Advertisement---

ಬೆಂಗಳೂರು; ರಾಜ್ಯದಲ್ಲಿ ಸದ್ಯಕ್ಕೆ ಜಾತಿಗಣತಿ ವರದಿಯದ್ದೇ ಸದ್ದು ಗದ್ದಲ. ವಿರೋಧ ಮಾಡುವವರೇ ಹೆಚ್ಚಾಗಿದ್ದಾರೆ. ಲಿಂಗಾಯತ ಸಮುದಾಯ ಮುಸ್ಲಿಂ ಸಮುದಾಯಕ್ಕಿಂತ ಕಡಿಮೆ ಸಂಖ್ಯೆಯನ್ನ ತೋರಿಸಲಾಗಿದೆ. ಆದರೆ ಅದು ವೀರಶೈವ ಬೇರೆ ಆಗಿರುವ ಕಾರಣ. ಇದಿಒಗ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತರನ್ನು ಎದುರಾಕಿಕಿಂಡು ಸರ್ಕಾರ ನಡೆಸಲು ಸಾಧ್ಯವಾ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಒಕ್ಕಲಿಗರ ನೇತೃತ್ವದಲ್ಲೂ ಒಂದು ಮೀಟಿಂಗ್ ನಡೆದಿದೆಯಲ್ಲ ಸರ್ ಎಂದು ಕೇಳಿದಾಗ, ಮಾಡಲಿ. ಅವರು ಕೂಡ ನಾಳೆ ಅಭಿಪ್ರಾಯವನ್ನು ತಿಳಿಸಬೇಕು ಅಲ್ವಾ. ಐದು ಜನ ಇದ್ದಾರೆ ಒಕ್ಕಲಿಗ ಅಭಿವೃದ್ಧಿಯಲ್ಲಿ. ಅವರವರ ಅಭಿಪ್ರಾಯ ಹೇಳಬೇಕಲ್ವಾ.

ಲಿಂಗಾಯತ ಮತ್ತು ಒಕ್ಕಲಿಗರಿಲ್ಲದೆ ರಾಜ್ಯಭಾರ ಮಾಡುವುದಕ್ಕೆ ಸಾಧ್ಯವಾ ಎಂಬ ಶಾಮನೂರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನವರು, ಇದು ಸೋಷಿಯಲ್ ಎಕಾನಾಮಿಕ್ ಸರ್ವೇ. ಯಾರಿಗೂ ಅನ್ಯಾಯ ಆಗಲ್ಲ. ಅನ್ಯಾಯ ಆಗೋದಕ್ಕೆ ಬಿಡಲ್ಲ ಎಂದಿದ್ದಾರೆ.

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಮೀಕ್ಷೆ ಏನಿದೆ ಅದು ಜಾತಿಗಣತಿ ಅಲ್ಲ. ಪದೇ ಪದೇ ಹೇಳ್ತಾ ಇದ್ದೀನಿ. ಇದನ್ನ ಸಾರ್ವಜನಿಕರು ಗೊಂದಲ ಮಾಡಿಕೊಳ್ಳೋದು ಬೇಡ. ಸಮೀಕ್ಷೆ ಹಿಂದುಳಿದ ವರ್ಗದಲ್ಲಿ ಇರುವಂತ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಎತ್ತಿ ಹಿಡಿಯುವಂತ ಕೆಲಸ ಮಾಡಬೇಕಾಗಿರುವ ಸಮೀಕ್ಷೆ ಇದು. ವೈಜ್ಞಾನಿಕವಾಗಿ ಆಗಿದೆಯೋ, ಅವೈಜ್ಞಾನಿಕವಾಗಿ ಆಗಿದೆಯೋ ಆ ಸ್ಪಷ್ಟನೆ ನಾಳೆ ಕ್ಯಾಬಿನೆಟ್ ನಲ್ಲಿ ಆಗುತ್ತೆ. ಯಾಕಷ್ಟು ಅವಸರ. ಅದರಲ್ಲಿರುವ ಸಂಪೂರ್ಣ ಮಾಹಿತಿ ನೋಡಿದ ಬಳಿಕ ವಿರೋಧ ಮಾಡಲಿ. ಯಾಕಷ್ಟು ಆತಂಕ, ಆತುರದಲ್ಲಿದ್ದಾರೆ ಎಲ್ಲರು. ಯಾವುದೇ ಸಮುದಾಯಗಳಿಗೆ ಲೋಪ ಆಗುತ್ತೆ ಅದನ್ನ ತಿದ್ದಿಕೊಳ್ಳುವ ಪ್ರಯತ್ನವಾಗಲಿದೆ. ಲಿಂಗಾಯತರು, ಒಕ್ಕಲಿಗರು, ದಲಿತರನ್ನು ಎದುರಾಕಿಕೊಳ್ಳುವ ಪ್ರಶ್ನೆ ಇಲ್ಲಿ ಬರಲ್ಲ. ಮೊದಲು ಎಲ್ಲದಕ್ಕೂ ದತ್ತಾಂಶ ಬೇಕಲ್ವಾ. ಅದನ್ನೇ ಮಾಡ್ತಾ ಇರೋದು ಈಗ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...