ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವುವಾದ ಸೃಷ್ಟಿಸಿದ್ದ ನಾದಬ್ರಹ್ಮ ಹಂಸಲೇಖ ಇಂದು ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಬಸವನಗುಡಿ ಠಾಣೆಯ ಠಾಣಾಧಿಕಾರಿ ರಮೇಶ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ.
ಸುಮಾರು 25-30 ಪ್ರಶ್ನೆಗಳನ್ನ ಹಂಸಲೇಖ ಅವರಿಗೆ ಕೇಳಿದ್ದಾರೆ ಎನ್ನಲಾಗಿದೆ. ಕೆಲವೇ ನಿಮಿಷಗಳಷ್ಟೇ ಹಂಸಲೇಖ ಅವರು ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ. ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹಂಸಲೇಖ ಪರ ವಕೀಲರು, ಮತ್ತೆ ವಿಚಾರಣೆಗೆ ಕರೆದರೆ ಬರ್ತೇವೆ ಎಂದಿದ್ದಾರೆ.
ನಾವೂ ಕಾನೂನಿಗೆ ಗೌರವ ಕೊಡ್ತೇವೆ. ಈಗ ಕಾನೂನಿನ ಪ್ರಕ್ರಿಯೆ ಆರಂಭವಾಗಿದೆ. ಹೆಚ್ವಿನ ಮಾಹಿತಿ ನೀಡಲು ಆಗೋದಿಲ್ಲ. ನಮಗೆ ಸಂವಿಧಾನದಲ್ಲಿ ಗೌರವವಿದೆ. ಮುಂದಿನ ವಿಚಾರಣೆಗೆ ಇನ್ನು ದಿನಾಂಕ ಕೊಟ್ಟಿಲ್ಲ ಎಂದಿದ್ದಾರೆ. ಇನ್ನು ಹಂಸಲೇಖ ಅವರ ಜೊತೆಗೆ ನಟ ಚೇತನ್ ಕೂಡ ಪೊಲೀಸ್ ಠಾಣೆಗೆ ಬಂದಿದ್ದರು. ಆದ್ರೆ ಅವರ ವಿರುದ್ಧ ಹಿಂದೂಪರ ಸಂಘಟನೆಗಳು ಧರಣಿ ಕುಳಿತಿದ್ದರು.