ಬಾಗಲಕೋಟೆ: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆಗೂ ಮುನ್ನ 200 ಯೂನಿಟ್ ಉಚಿತ ಎಂದು ಘೋಷಣೆ ಮಾಡಿತ್ತು. ಇದೀಗ ರಾಜ್ಯದ ಜನತೆ ಅದಕ್ಕಿರುವ ನಿಯಮಗಳೇನು ಅಂತ ತಿಳಿದು, ವಿದ್ಯುತ್ ಉಚಿತವಾಗಿ ಪಡೆಯುವುದಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಒಂದು ಗ್ರಾಮ ವಿದ್ಯತ್ ಬಿಲ್ ಅನ್ನೇ ಪಾವತಿಸಲ್ಲ. ಅದು ಒಂದಲ್ಲ ಎರಡಲ್ಲ ಸುಮಾರು 22 ವರ್ಷದಿಂದ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳದಲ್ಲಿ ಇಂಥದ್ದೊಂದು ವಿಚಾರ ಬೆಳಕಿಗೆ ಬಂದಿದೆ. ಅದರಲ್ಲೂ ಈ ಗ್ರಾಮ ರೈತ ಹೋರಾಟಕ್ಕೆ ಹೆಸರಾದ ಗ್ರಾಮವಾಗಿದೆ. 2001 ರಿಂದಾನೂ ಈ ಗ್ರಾಮ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಇದಕ್ಕೆಲ್ಲಾ ಕೃಷಿ ಹೋರಾಟವೇ ಕಾರಣವಾಗಿದೆ. ಏನಂದ್ರೆ ಬೆಳೆದ ಬೆಲೆಗೆ ಸೂಕ್ರ ಬೆಲೆ ನೀಡಿದರೆ ಮಾತ್ರ ವಿದ್ಯುತ್ ಬಿಲ್ ಕಟ್ಟುತ್ತೇವೆ ಎಂದು ಆಗ್ರಹಿಸಿದ್ದಾರೆ.
2001ರಲ್ಲಿ ರೈತ ಹೋರಾಟಗಾರ ನಂಜುಂಡಸ್ವಾಮಿ ಹಾಗೂ ರಮೇಶ ಗಡದನ್ನವರ ನೇತೃತ್ವದಲ್ಲು ಹೋರಾಟ ನಡೆದಿತ್ತಂತೆ. ಆಗ 440 ವ್ಯಾಟ್ ವಿದ್ಯುತ್ ಪೂರೈಕೆ ಮಾಡಿದ್ದರೆ ಮಾತ್ರ ಮೋಟರ್ ಆನ್ ಆಗ್ತಾ ಇತ್ತಂತೆ. ಆದರೆ 250 ವ್ಯಾಟ್ ವಿದ್ಯುತ್ ಮಾತ್ರ ಪೂರೈಕೆಯಾಗಿತ್ತಂತೆ. ಹೀಗಾಗಿ ಅಂದಿನಿಂದ ಹೋರಾಟ ಮುಂದುವರೆದಿದೆ. ಈಗ ಬೆಳೆಗೆ ಬೆಂಬಲ ಬೆಲೆ ಸಿಗದೆ ಇದ್ದರೆ ಬಿಲ್ ಕಟ್ಟಲ್ಲ ಅಂತಿದ್ದಾರೆ.