ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಅವರಿಗೆ ರೂ.4 ಸಾವಿರ ಪಿಂಚಣಿ : ರಾಹುಲ್ ಗಾಂಧಿ

ಖಮ್ಮಂ, ತೆಲಂಗಾಣ : ಭಾರತ್ ಜೋಡೋ ಯಾತ್ರೆಗೆ ತೆಲಂಗಾಣದ ಜನರು ಬೆಂಬಲವಾಗಿ ನಿಂತಿದ್ದಾರೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದರು.

ನಾವು ಅಧಿಕಾರಕ್ಕೆ ಬಂದರೆ ವಿಧವೆಯರು ಮತ್ತು ವೃದ್ಧರಿಗೆ ರೂ.4 ಸಾವಿರ ಪಿಂಚಣಿ ಮತ್ತು ಗಿರಿಜನರಿಗೆ ಭೂಮಿ ನೀಡಲಾಗುವುದು ಎಂದು ರಾಹುಲ್ ಘೋಷಿಸಿದರು.

ಖಮ್ಮಂನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಬಿಆರ್‌ಎಸ್ ಅನ್ನು ಟೀಕಿಸಿದರು.
ದೇಶವನ್ನು ಒಗ್ಗೂಡಿಸುವುದು ನಮ್ಮ ನೀತಿ.. ದೇಶ ಒಡೆಯುವುದು ಬಿಜೆಪಿ ಯವರ ನೀತಿ.. ಕಾಂಗ್ರೆಸ್ ಸಿದ್ಧಾಂತಗಳ ಪರವಾಗಿ ಜನ ನಿಂತಿದ್ದಾರೆ, ಕಾಂಗ್ರೆಸ್ ಪಕ್ಷ ಜನರ ಮನಸ್ಸಿನಲ್ಲಿದೆ ಎಂದು ರಾಹುಲ್ ಹೇಳಿದರು

ತೆಲಂಗಾಣ ಬಹಳಷ್ಟು ಜನರ ಕನಸಾಗಿತ್ತು. 9 ವರ್ಷಗಳ ಆಡಳಿತದಲ್ಲಿ ಬಿಆರ್ ಎಸ್ ಜನರ ಆಶೋತ್ತರಗಳನ್ನು ಕಡೆಗಣಿಸಿದೆ.

”ಕರ್ನಾಟಕದಲ್ಲಿ ಜನವಿರೋಧಿ ಸರಕಾರವನ್ನು ಕಿತ್ತೊಗೆದಿದ್ದೇವೆ. ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ.
ಕರ್ನಾಟಕದಲ್ಲಿ ನಡೆದದ್ದೇ ತೆಲಂಗಾಣದಲ್ಲೂ ನಡೆಯುತ್ತದೆ. ತೆಲಂಗಾಣದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ತೆಲಂಗಾಣದಲ್ಲಿ ಬಿಜೆಪಿಗೆ ಬಿಆರ್‌ಎಸ್‌ ಬಿ ತಂಡವಿದ್ದಂತೆ, ಬಿಜೆಪಿ ಬಿ ಟೀಮ್‌ನೊಂದಿಗೆ ನಮ್ಮ ಹೋರಾಟ ನಡೆಯುತ್ತಿದೆ. ಕೆಸಿಆರ್ ಅವರ ಭ್ರಷ್ಟಾಚಾರಕ್ಕೆ ಮೋದಿಯವರ ಆಶೀರ್ವಾದವಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *