ಚಾಮರಾಜನಗರ: ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಟಿಕೆಟ್ ಕಾಂಪಿಟೇಷನ್ ಶುರುವಾಗಿದೆ. ವಲಸಿಗರೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆಂದು ಒಳಗೊಳಗೆ ಮನಸ್ತಾಪಗಳು ಆರಂಭವಾಗಿದೆ. ಇದೀಗ ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ನೇರವಾಗಿಯೇ ಸವಾಲು ಹಾಕಿದ್ದಾರೆ. ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದಾಗ ಈ ವಿಚಾರ ಮಾತನಾಡಿದ್ದಾರೆ. ನಮ್ಮ ಅಭಿಪ್ರಾಯ ಪರಿಗಣಿಸದೆ ಇದ್ದರೆ ಅವರು ಅನುಭವಿಸಬೇಕಾಗುತ್ತದೆ. ಕ್ಷೇತ್ರದಲ್ಲಿ ಹಗಲು, ರಾತ್ರಿ ಯಾರು ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಯಾರು ಹೋರಾಟ ಮಾಡಿದ್ದಾರೆ. ಯಾರು ಪಕ್ಷ ಸಂಘಟನೆಗೆ ಶ್ರಮ ಹಾಕಿದ್ದಾರೆ ಎಂಬುದು ನನಗೆ ಗೊತ್ತು. ಅವರಿಗೆ ಅವಕಾಶ ಕೊಡಬೇಕು ಎಂದಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಕೋಲಾರ ವಿಸಿಟ್ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಸುರಕ್ಷಿತ ಸ್ಥಳ ಹುಡುಕಿ ಹುಡುಕಿ ಕೋಲಾರಕ್ಕೆ ಬಂದಿದ್ದಾರೆ. ಕೋಲಾರ ಸೇಫೆಸ್ಟ್ ಪ್ಲೇಸ್, ಗೆದ್ದು ಬಂದು ಬಿಡಬಹುದು ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


