ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ರಕ್ತ ಸಂಚಲನ ಕಡಿಮೆಯಾಗಿದೆ ಎಂದು ಅರ್ಥ..!

1 Min Read

 

 

ಹೃದಯ ಚೆನ್ನಾಗಿದ್ದರೆ ನಮ್ಮ ದೇಹ ಚೆನ್ನಾಗಿರುತ್ತದೆ. ಹೃದಯದ ಬಡಿತ ಚೆನ್ನಾಗಿದ್ದರೆ ಆರೋಗ್ಯವಾಗಿ ಜೀವಿಸುತ್ತೀವಿ. ಹೃದಯ ಬಡಿತವೇ ನಿಂತರೆ, ಯಾರು ಎಷ್ಟೇ ಕೂಗಿದರೂ ಕೇಳಿಸದಷ್ಟು ದೂರಕ್ಕೆ ಸಂಚಾರ ಮಾಡಿ ಬಿಡುತ್ತೀವಿ. ಹೃದಯಕ್ಕೆ ಮಾತ್ರವಲ್ಲ ನಮ್ಮ ದೇಹಕ್ಕೆ ರಕ್ತ ಸಂಚಾರ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಎಲ್ಲಾ ಕಡೆಗೂ ರಕ್ತ ಸರಿಯಾದ ರೀತಿಯಲ್ಲಿ ಸಂಚಲನವಾಗುತ್ತಿದ್ದರೆ, ದೇಹ ಆರೋಗ್ಯದಿಂದ ಇರುತ್ತದೆ. ಒಂದು ವೇಳೆ ರಕ್ತ ಸಂಚಲನ ಆಗುತ್ತಿಲ್ಲ ಎಂದಾದರೇ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ನೆಗ್ಲೆಕ್ಟ್ ಮಾಡಬೇಡಿ.

ಒಂದು ವೇಳೆ ದೇಹದಲ್ಲಿ ರಕ್ತ ಸಂಚಲನ ಕಡಿಮೆಯಾದರೆ ದೇಹದ ಕಾಲುಗಳು, ಬೆರಳುಗಳು, ಪಾದಗಳಲ್ಲೆಲ್ಲಾ ಕಾಣಿಸಿಕೊಳ್ಳುತ್ತದೆ. ನಡೆಯುವಾಗ ಸ್ನಾಯುಗಳಲ್ಲೆಲ್ಲಾ ನೋವು ಕಂಡು ಬರುವುದು. ಸೂಜಿಯಲ್ಲಿ ಚುಚ್ಚಿದ ಅನುಭವವಾಗುವುದು. ಬೆರಳುಗಳು ತಣ್ಣಗಾಗುವುದು. ತ್ವಜೆ ತಿರುಚಿಕೊಳ್ಳುವಂತೆ ಆಗುವುದು. ಎದೆಯಲ್ಲಿ ನೋವು, ಕೈಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ದೇಹದ ರಕ್ತಸಂಚಾರ ಕಡಿಮೆಯಾದರೆ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಷ್ಟಕ್ಕೂ ಅದಕ್ಕೆ ಕಾರಣಗಳೇನು ಅನ್ನೋದನ್ನು ನೋಡೋದಾದ್ರೆ, ಅತ್ಯಧಿಕ ಧೂಮಪಾನ ಮಾಡುವವರಲ್ಲಿ, ಸತ್ಯಧಿಕ ಒತ್ತಡ ಇರುವವರಲ್ಲಿ ಇಂತಹ ಲಕ್ಷಣಗಳು ಕಾಣಿಸುತ್ತವೆ. ಹಾಗೇ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾದರೆ, ನರಗಳಿಗೆ ಹಾನಿಯುಂಟಾದವರಿಗೆ, ಮಧುಮೇಹಿಗಳಿಗೆ, ಸಂಧಿವಾತ ಸಮಸ್ಯೆ ಇರುವವರಿಗೆ ರಕ್ತದ ಸಂಚಾರದಲ್ಲಿ ವ್ಯತ್ಯಯ ಕಂಡು ಬರುತ್ತದೆ.

ಒಂದು ವೇಳೆ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗಿದೆ ಎಂದು ನಿಮಗೆ ಎನಿಸಿದರೆ ಈ ರೀತಿ ಮಾಡಿ, ಬೈಪಾಸ್ ಮಾಡವ ಮೂಲಕ ನರಗಳಲ್ಲಿನ ಬ್ಲಾಕ್ ತೆಗೆಯಬಹುದು. ಹೆಪ್ಪುಗಟ್ಟಿದ ರಕ್ತವನ್ನು ತೆಗೆಸಿಕೊಳ್ಳಬೇಕು. ಹೀಗಾಗಿ ಸೂಕ್ತವಾದ ವೈದ್ಯರನ್ನು ಭೇಟಿ ಮಾಡಿ, ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ.

Share This Article
Leave a Comment

Leave a Reply

Your email address will not be published. Required fields are marked *