ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವುದಕ್ಕೆ ಸಾಕಷ್ಡು ಶ್ರಮ ಹಾಕುತ್ತಿದೆ. ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಈಗ ಅಕ್ಕಿಯನ್ನು ಕೊಡುವ ಯೋಜನೆಗೆ ಚಾಲನೆ ನೀಡಬೇಕಿದೆ. ಈ ಬಗ್ಗೆ ಸಿದ್ದರಾಮಯ್ಯ ಅದಾಗಲೇ ಕೇಂದ್ರದಿಂದ ಹಣ ಕೊಟ್ಟರು ನೀಡುತ್ತಿಲ್ಲ ಎಂದಿದ್ದರು.
ಅನ್ನ ಭಾಗ್ಯ ಯೋಜನೆಗೆ ತೆಲಂಗಾಣ ಸಿಎಂ ಜೊತೆಗೆ ಖುದ್ದಾಗಿ ಮಾತನಾಡಿದ್ದು. ಅಲ್ಲಿ ಅಕ್ಕಿ ಲಭ್ಯವಿಲ್ಲ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದವರೊಂದಿಗೆ ಮುಖ್ಯ ಕಾರ್ಯದರ್ಶಿಗಳು ಮಾತನಾಡುತ್ತಿದ್ದಾರೆ. ಛತ್ತಿಸ್ ಗಡ ರಾಜ್ಯದಲ್ಲಿ 1.50 ಲಕ್ಷ ಟನ್ ಅಕಗಕಿ ಲಭ್ಯವಿದೆ ಎಂದಿದ್ದಾರೆ.
ಇನ್ನು ವಿಜಯೇಂದ್ರ ಅವರು, ರಾಜ್ಯದಲ್ಲಿಯೇ ಅಕ್ಕಿ ಲಭ್ಯವಿದ್ದರು ಕಮಿಷನ್ ಆಸೆಗೋಸ್ಕರ ಹೊರರಾಜ್ಯದಿಂದ ತರಿಸುತ್ತಿದ್ದಾರೆ ಎಂದು ಹೇಳಿದ್ದರು. ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿಯೇ ಅಕ್ಕಿ ದೊರೆಯುವುದಾದರೆ ಕೊಡಿಸಲಿ. ವಿಜಯೇಂದ್ರ ಅವರ ರೈಸ್ ಮಿಲ್ ನಲ್ಲಿ ಅಕ್ಕಿ ಇದ್ದರೆ ಕೊಡಿಸಲಿ ಎಂದಿದ್ದಾರೆ.