ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ದೇಶದಲ್ಲಿ ಜಿಎಸ್ಟಿ ಅಂತ ಬಂತು. ಈಗ ರಾಜ್ಯದಲ್ಲಿ ವೈಎಸ್ಟಿ ಅಂತ ಬಂದಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.
ವೈಎಸ್ಟಿ ತೆರಿಗೆ ಬಗ್ಗೆ ಪತ್ತೆ ಮಾಡ್ತಾ ಇದ್ದೀನಿ. ಆಮೇಲೆ ನೋಡೋಣ. ವೈಎಸ್ಟಿ ತೆರಿಗೆ ಅಂತ ಈ ಸರ್ಕಾರದಲ್ಲಿ ಬಂದಿದೆಯಂತೆ. ಈ ಸರ್ಕಾರದಲ್ಲಿ ವರ್ಗಾವಣೆ ಮಾಡದೆ ವಸೂಲಿ ಶುರುವಾಗಿದೆ. ವರ್ಗಾವಣೆ ಶುರುವಾದ್ರೆ ಇನ್ಯಾವ ರೀತಿ ಇರುತ್ತೋ ಹಾಗಾದ್ರೆ. ನನ್ನ ಇಲಾಖೆಯಲ್ಲಿ ಇನ್ನೂ ವರ್ಗಾವಣೆ ಆಗಿಲ್ಲ ಅಂತಾರೆ. ಹಾಗಾದ್ರೆ ನಮಗೇನು ಮಾಹಿತಿ ಬರೋದೆ ಇಲ್ವಾ.
ಇದೊಂದು ಪಾರದರ್ಶಕ ಸರ್ಕಾರ ಅಲ್ಲ ಅಂತ ಗೊತ್ತಾಗ್ತಾ ಇದೆ. ಮನೇಲಿ ಕೂರಿಸಿಕೊಂಡು ಒಂದು ಗಂಟೆಯವರೆಗೂ ಮಾಡುತ್ತಾರೆ. ಇದನ್ನು ಸರ್ಕಾರ ಅಂತ ಕರಿತಾರ. ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಇದ್ದಾರೆ. ಸಿದ್ಧರಾಮಯ್ಯ ಒಬ್ಬರೇನಾ ಸರ್ಕಾರದಲ್ಲಿ ಮುಖ್ಯಮಂತ್ರಿ. ನಾನು ಸಿಎಂ ಆಗಿದ್ದಾಗ ಮಂತ್ರಿಗಳು ಹೇಗೆ ನಡ್ಕೊಂಡ್ರು. ಯಾವ ವರ್ಗಾವಣೆ ಮಾಡೋ ಪರಿಸ್ಥಿತಿ ನನಗೆ ಇರಲಿಲ್ಲ. ಕಾಂಗ್ರೆಸ್ ನವರ ಆದೇಶದಂತೆ ಎಲ್ಲವೂ ನಡೆಯಬೇಕಿತ್ತು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.