ಹಾಸನ: ಪಿಎಸ್ಐ ಅಕ್ರಮದಲ್ಲಿ ಜೆಡಿಎಸ್ ಪಕ್ಷದವರ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರೇವಣ್ಣ, ನೇಮಕಾತಿಯಲ್ಲಿ ಜೆಡಿಎಸ್ ಇರಬಹುದು, ಬಿಜೆಪಿ ಇರಬಹುದು, ಕಾಂಗ್ರೆಸ್ ಯಾರೇ ಇರಲಿ ಅಕ್ರಮದ ಮಾಡಿದವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಬಡವರ ಮಕ್ಕಳು ನನ್ನ ಮಕ್ಕಳು ಸಬ್ ಇನ್ಸ್ಪೆಕ್ಟರ್ ಆಗ್ತಾನೆ ಅಂತ ಹೇಳಿ ಹೊಲ ಮನೆ ಮಾರಿ ಹಣ ಕೊಟ್ಟಿರುತ್ತಾರೆ. ಆ ಹಣವನ್ನು ವಾಪಾಸ್ ಕೊಡಿಸಬೇಕಾಗುತ್ತದೆ. ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಬಲಿಯಾಕಬೇಕಾಗುತ್ತದೆ. ತನಿಖೆ ನಡೆಯುತ್ತಿರುವಾಗ ಹೆಚ್ಚಿಗೆ ಏನು ಹೇಳಲ್ಲ. ನಮ್ಮ ಪಾರ್ಟಿಯವರಿದ್ದರೆ ಅವರನ್ನು ಬಲಿ ಹಾಕಿ ಇಷ್ಟನ್ನಷ್ಟೆ ಹೇಳಬಹುದು.
ಹೊಳೆನರಸೀಪುರ ಇರಬಹುದು, ಚನ್ನರಾಯಪಟ್ಟಣ ಇರಬಹುದು ನನಗೆ ಏನು ಗೊತ್ತಿಲ್ಲ. ನಾನು ಯಾವುದೇ ಪಿಎಸ್ಐ ಆಗಲಿ, ಕಾಲೇಜು ಲೆಕ್ಚರರ್ಸ್ ದಾಗಲಿ ಯಾವುದನ್ನು ರೆಕಮೆಂಡೆಷನ್ ಮಾಡಿಲ್ಲ. ಕೆಪಿಎಸ್ಸಿ ನಲ್ಲೂ ನಡೆಯುತ್ತಾ ಇದೆವಾಂತ ಬರ್ತಿದೆ. ಭ್ರಷ್ಟಾಚಾರದ ಬಗ್ಗೆ ಸಮಯ ಬಂದಾಗ ಹೇಳ್ತೀನಿ ಎಂದಿದ್ದಾರೆ.
ಪ್ರಾಮಾಣಿಕರಿಗೆ ನ್ಯಾಯ ಸಿಗಬೇಕು ತಪ್ಪಿತಸ್ಥ ರಿಗೆ ಶಿಕ್ಷೆಯಾಗಲಿ. ತನಿಖೆ ನಡೆಸುತ್ತಿದ್ದಾಗ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ. ಮಂತ್ರಿಗಳಿದ್ದಾರೋ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ನಾವೂ ಹಳ್ಳಿ ರೈತರು ಸರ್ ಕಿಂಗು ಪಿನ್ನು ಎಂಬುದೆಲ್ಲ ಗೊತ್ತಿಲ್ಲ. ನಾವೂ ಸಣ್ಣದಾಗಿ ಓದಿರುವವರು ಎಂದಿದ್ದಾರೆ.