ಮುಜರಾಯಿ ಇಲಾಖೆಯಲ್ಲಿ ವಯಸ್ಸಾದವರಿದ್ದರೆ, ಅವರ ಮಕ್ಕಳಿಗೆ ಕೆಲಸ : ಸರ್ಕಾರದಿಂದ ಆದೇಶ

1 Min Read

ಬೆಂಗಳೂರು: ಮುಜರಾಯಿ ಇಲಾಖೆಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಆದೇಶ ಹೊರಡಿಸಿದೆ. ಇಲಾಖೆಯಲ್ಲಿ ವಯಸ್ಸಾದವರು ಇದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ಇದ್ದರೆ, ಅವರ ಮಕ್ಕಳು ಕೆಲಸವನ್ನು ಮುಂದುವರೆಸಬಹುದಾಗಿದೆ. ಮುಜರಾಯಿ ಇಲಾಖೆಯ ಸಿ ಗ್ರೇಡ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿರುವ ವಯಸ್ಸಾಗಿದ್ದರೆ ಅಥವಾ ಅನಾರೋಗ್ಯಕ್ಕೆ ತುತ್ತಾಗಿ ಸೇವೆ ಸಲ್ಲಿಸಲು ಸಾಧ್ಯವಾಗದೆ ಇದ್ದಾಗ ಅವರ ಮಕ್ಕಳಿಗೆ ಹುದ್ದೆಯನ್ನು ನೀಡಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

 

ಮುಜರಾಯಿ ಇಲಾಖೆಯಲ್ಲಿ ಕೆಲಸ ಮಾಡುವ ಅರ್ಚಕರು ನಿಧನದ ಬಳಿಕ ಅವರ ಮಕ್ಕಳನ್ನು ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಸರ್ಕಾರದ ಆದೇಶದಲ್ಲಿ ಬದಲಾವಣೆಯಾಗಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದರು ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಸುಮಾರು, 34 ಸಾವಿರಕ್ಕೂ ಅಧಿಕ ಸಿ ಗ್ರೇಡ್ ದೇವಸ್ಥಾನಗಳು ಇದಾವೆ. ಈ ದೇವಾಲಯಗಳಿಗೆ ಅವಕಾಶ ನೀಡಲಾಗಿದೆ.

 

ಅರ್ಚಕರ ಸಂಘ ಸರ್ಕಾರದ ಬಳಿ ಈ ಸಂಬಂಧ ಮನವಿ ಮಾಡಿಕೊಳ್ಳಲಾಗಿತ್ತು. ಅನಾರೋಗ್ಯದಿಂದ ಇರುವ ಅರ್ಚಕರ ಮಕ್ಕಳಿಗೆ ಅವಕಾಶ ಮಾಡಿಕೊಡಲು ಮನವಿ ನಾಡಿದ್ದರು. ಇದೀಗ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಕಾನೂನು ಬದ್ಧ ವಾರಸುದಾರರಿಗೆ ನೀಡಲು ಸೂಚನೆ ನೀಡಿದೆ. ಆಯಾ ತಾಲೂಕಿನ ತಹಶಿಲ್ದಾರ್ ಹಂತದಲ್ಲಿ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ.

ಸರ್ಕಾರದ ಇಒ ರೀತಿಯ ನಿರ್ಧಾರ ಸಾಕಷ್ಟು ಅರ್ಚಕರಿಗೆ ಅನುಕೂಲವಾಗಲಿದೆ. ಮರಣದ ತನಕ ಅನಾರೋಗ್ಯವಿದ್ದರು ಅರ್ಚಕರೇ ಪೂಜೆ ಮಾಡಬೇಕಿತ್ತು. ಆದರೆ ಈಗ ಸರ್ಕಾರದ ನಿರ್ಧಾರದಿಂದ ಅರ್ಚಕರು ತಮ್ಮ ಮಕ್ಕಳಿಗೆ ಅಧಿಕಾರ ಹಸ್ತಾಂತರ ಮಾಡಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *