ರಸ್ತೆ ಅಗಲೀಕರಣ ಮಾಡದಿದ್ದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ : ಚಿತ್ರದುರ್ಗ ನಾಗರಿಕರ ಹಿತರಕ್ಷಣಾ ಸಮಿತಿ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಜ.08 : ನಗರದ ಗಾಂಧೀವೃತ್ತದಿಂದ ಜೆ.ಎಂ.ಐ.ಟಿ. ವೃತ್ತದವರೆಗಿನ ದಾವಣಗೆರೆ ರಸ್ತೆಯನ್ನು ಚಳ್ಳಕೆರೆ ಗೇಟ್‍ನಿಂದ ಕನಕ ವೃತ್ತದವರೆಗಿನ ರಸ್ತೆಯನ್ನು ಅಗಲೀಕರಣ ಮಾಡಿದಂತೆ ಇಷ್ಟೇ ಅಳತೆಯಲ್ಲಿ ಅಗಲೀಕರಣ ಮಾಡಬೇಕು ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಚಿತ್ರದುರ್ಗ ನಾಗರಿಕರ ಹಿತರಕ್ಷಣಾ ಸಮಿತಿ ಜಿಲ್ಲಾಡಳಿತವನ್ನು ಎಚ್ಚರಿಸಿದೆ.

ಚಿತ್ರದುರ್ಗ ನಗರದಲ್ಲಿ ಬುಧವಾರ ಚಿತ್ರದುರ್ಗ ನಾಗರಿಕರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಜಿಲ್ಲಾಡಳಿತ ಮತ್ತು ನಗರಸಭೆಯು ಚಿತ್ರದುರ್ಗ ನಗರದ ಮುಖ್ಯ ರಸ್ತೆಯ ಅಗಲೀಕರಣ ಮಾಡಲು ತೀರ್ಮಾನಿಸಿರುವುದು ಸ್ವಾಗತಾರ್ಹ. ತಾವು ನಿರ್ಣಯಿಸಿರುವಂತೆ ನಗರದ ಚಳ್ಳಕೆರೆ ಗೇಟ್‍ನಿಂದ ಕನಕ ವೃತ್ತದವರೆಗಿನ ರಸ್ತೆಯನ್ನು ಅಗಲೀಕರಣ ಮಾಡುವುದಾಗಿ ತಿಳಿಸಿರುತ್ತೀರಿ. ಇದು ನಗರದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ನಿರ್ಣಯವಾಗಿದೆ. ನಮ್ಮ ಬೇಡಿಕೆ ಏನೆಂದರೆ, ಈ ರಸ್ತೆಯ ಜೊತೆಗೆ ನಗರದ ಗಾಂಧೀವೃತ್ತದಿಂದ ಜೆ.ಎಂ.ಐ.ಟಿ. ವೃತ್ತದವರೆಗಿನ ದಾವಣಗೆರೆ ರಸ್ತೆಯನ್ನು ಸಹ ಇಷ್ಟೇ ಅಳತೆಯಲ್ಲಿ ಅಗಲೀಕರಣ ಮಾಡಬೇಕು. ಈ ರಸ್ತೆಯ ಅಗಲೀಕರಣ ತುಂಬಾ ಅವಶ್ಯಕತೆ ಇದೆ. ಈ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ. ಎ.ಪಿ.ಎಂ.ಸಿ. ಮುಖ್ಯರಸ್ತೆ, ರೈಲ್ವೆ ನಿಲ್ದಾಣ ಮತ್ತು ಬ್ಯಾಂಕ್‍ಗಳು ಹಾಗೂ ಪ್ರಮುಖ ವ್ಯಾಪಾರದ ಮಾಲ್‍ಗಳು ಇರುತ್ತವೆ. ಇದರಿಂದ ಈ ರಸ್ತೆಯಲ್ಲಿ ಹೆಚ್ಚು ವಾಹನಗಳ ಓಡಾಟ ಮತ್ತು ಹೆಚ್ಚಿನ ಜನಸಂದಣಿ ಇರುತ್ತದೆ. ಹಾಗಾಗಿ ಈ ರಸ್ತೆಯ ಅಗಲೀಕರಣದ ನಿರ್ಣಯವನ್ನು ಒಂದು ತಿಂಗಳ ಕಾಲಾವಧಿಯೊಳಗೆ ತೆಗೆದುಕೊಳ್ಳದಿದ್ದರೆ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ನಾಗರಿಕರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ರುದ್ರೇಶ್.ಪಿ ಓಂಕಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *