ಸಾರ್ವಜನಿಕರು ಕಾಲಕಾಲಕ್ಕೆ ಮೂಳೆ ಸಾಂದ್ರತೆ ರೋಗಕ್ಕೆ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ : ಡಾ.ವೆಂಕಟೇಶ್ 

2 Min Read

 

ಸುದ್ದಿಒನ್, ಚಳ್ಳಕೆರೆ, ಜೂ.13 : ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಜೀವನಶೈಲಿ ಬದಲಾವಣೆ ಕಾಣುತ್ತಿದ್ದು ವೇಗದ ಬದುಕಿನಿಂದ ತಮ್ಮ ಆರೋಗ್ಯದ ಕಡೆ ಗಮನಹರಿಸದೆ ನಿರ್ಲಕ್ಷ ವಹಿಸುತ್ತಿರುವುದರಿಂದ ಕೀಲು ಮೂಳೆ ರೋಗಗಳಿಗೆ ತುತ್ತಾಗುತ್ತಿದ್ದು ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೀಲು ಮೂಳೆ ತಜ್ಞ ಡಾ. ವೆಂಕಟೇಶ್ ಅಭಿಪ್ರಾಯ ಪಟ್ಟರು. 

ನಗರದ ಸುರಕ್ಷಾ ಪಾಲಿ ಕ್ಲಿನಿಕ್ ಆಸ್ಪತ್ರೆ ಆವರಣದಲ್ಲಿ ಸುರಕ್ಷಾ ಪಾಲಿ ಕ್ಲಿನಿಕ್ ಮತ್ತು ನೇತಾಜಿ ಸ್ನೇಹ ಬಳಗ ಹಾಗೂ ನಗರಸಭೆ ನೂತನ ನಾಮನಿರ್ದೇಶನ ಸದಸ್ಯರ ಸಹಭಾಗಿತ್ವದಲ್ಲಿ ಉಚಿತ ಮೂಳೆ ಸಾಂದ್ರಿತ ಪರೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ರೋಗವು ಹೆಚ್ಚಿನದಾಗಿ ಎಳೆ ವಯಸ್ಸಿನ ಮಕ್ಕಳಲ್ಲಿ ಮತ್ತು ವೃದ್ಧಾಪ್ಯ ವಯಸ್ಸಿನ ಸ್ತ್ರೀಯರಲ್ಲಿ ಕಂಡುಬರುತ್ತದೆ ತಾಯಿ ಮಗುವಿಗೆ ಸ್ಥನ್ಯ ಪಾನ ಮಾಡಿಸದೆ ಇದ್ದಾಗ ರೋಗಕ್ಕೆ ತುತ್ತಾಗಿ ಅಂಗವಕಲ್ಯ ಆಗುವ ಸಂಭವಿಸುತ್ತದೆ ಹಾಗೆಯೇ ವೃದ್ಧಾಪ್ಯದಲ್ಲಿ ಸ್ತ್ರೀಯರಿಗೆ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಕೀಲು ಮೂಳೆಗಳು ಸವೆದು ಮೂಳೆ ಸಾಂದ್ರಿತ ರೋಗಕ್ಕೆ ಈಡಾಗುತ್ತಾರೆ ಈ ರೋಗವನ್ನು ನಿವಾರಿಸಿಕೊಳ್ಳಲು ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡುವ ಮೂಲಕ ವಾಸಿ ಮಾಡಿಕೊಳ್ಳಬಹುದಾಗಿದೆ ಈ ಮೂಳೆ ಸಾಂದ್ರಿತ ಪರೀಕ್ಷೆಯನ್ನು ಇಂದು ನೇತಾಜಿ ಸ್ನೇಹ ಬಳಗ ಹಾಗೂ ಸುರಕ್ಷಾ ಪಾಲಿ ಕ್ಲಿನಿಕ್ ವತಿಯಿಂದ ಉಚಿತವಾಗಿ ಹಮ್ಮಿಕೊಂಡಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾರದಾ ಆಶ್ರಮದ ಪೂಜ್ಯ ತ್ಯಾಗಮಯಿ ಮಾತಾಜಿ ಬಡವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿರುವುದು ವಿರಳವಾಗಿದೆ ಹೆಚ್ಚಿನ ಹಣ ನೀಡಿ ರೋಗವನ್ನು ವಾಸಿ ಮಾಡಿಕೊಳ್ಳಲಾಗದೆ ಬಡವರ್ಗದ ಜನರು ಸಾವನ್ನಪ್ಪುವ ಸ್ಥಿತಿಗೆ ತಲುಪುತ್ತಿದ್ದಾರೆ ಇಂತಹ ಸನ್ನಿವೇಶದಲ್ಲಿ ನೇತಾಜಿ ಸ್ನೇಹ ಬಳಗ ಹಾಗೂ ಸುರಕ್ಷಾ ಪಾಲಿಚೈನಿಕ್ ವತಿಯಿಂದ ಉಚಿತವಾಗಿ ಮೂಳೆ ಸಾಂದ್ರತೆ ಪರೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಸಭೆ ನಾಮನಿರ್ದೇಶಕ ಸದಸ್ಯ ನೇತಾಜಿ ಆರ್ ಪ್ರಸನ್ನ ಮಾಜಿ ನಗರಸಭಾ ಸದಸ್ಯ ಆರ್ ಪ್ರಸನ್ನ ಕುಮಾರ್ ಫರೀದ್ ಖಾನ್ ಕಂಟ್ರಾಕ್ಟರ್ ನಾಗೇಂದ್ರ ಬೋಜರಾಜ ನಗರಸಭೆ ಆರೋಗ್ಯ ನಿರೀಕ್ಷಕಿ ಗೀತಾ ಸರಸ್ವತಿ ರಾಜಮ್ಮ ಡಾ.ಭಾರ್ಗವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *