ಮಂಗಳೂರು: ಹಿಜಾಬ್ ವಿಚಾರವಾಗಿ ಕಲ್ಲಡ್ಕ ಪ್ರಭಾಕರ್ ಮಾತನಾಡಿದ್ದು, ಇಲ್ಲಿ ಸಮವಸ್ತ್ರದ ಕಾನೂನಿದೆ. ಸರ್ಕಾರ, ಕೋರ್ಟ್ ಕೂಡ ಹೇಳಿದೆ. ಕೋರ್ಟ್ ಹೇಳಿದ್ದನ್ನ ಒಪ್ಪಿಕೊಳ್ಳಬೇಕು. ಅವರಿಗೆ ಸುಪ್ರೀಂ ಕೋರ್ಟ್ ಹೋಗೋದಕ್ಕೆ ಅವಕಾಶವಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಆ ತೀರ್ಪು ನೀಡಿದರು ಒಪ್ಪಿಕೊಳ್ಳಲ್ಲ ಇವರು ಎಂದಿದ್ದಾರೆ.
ನಮ್ಮ ಕಾನೂನನ್ನ ಒಪ್ಪಿಕೊಳ್ಳದೆ ಇದ್ದರೆ ಈ ದೇಶ ಬಿಟ್ಟು ಹೋಗಲಿ. ಇಲ್ಲಿ ಯಾಕೆ ಇರೋದು. ನಾಳೆ ನಿಮ್ಮ ಹೆಂಡತಿಗೇನೆ ಬುರ್ಖಾ ಹಾಕುತ್ತಾರೆ. ಅದಕ್ಕೆ ನಿಮಗೆ ಒಪ್ಪಿಗೆಯಾ..? ಅದಕ್ಕೆ ಹೇಳೋದು ಅವರ ಪದ್ಧತಿಯನ್ನ ಸಾರ್ವಜನಿಕವಾಗಿ ಬೇರೆ, ಕಾನೂನು ಹೀಗೆ ಇರಬೇಕು ಎಂದರೆ ಅದನ್ನ ಒಪ್ಪಿಕೊಳ್ಳಲೇಬೇಕು. ಇದು ಈ ನೆಲದ ಕಾನೂನು. ಎಲ್ಲರು ಒಪ್ಪಿಕೊಳ್ಳಬೇಕು. ಆಗೋದಿಲ್ಲ ಎಂದರೆ ಹೋಗುವ ಜಾಗಕ್ಕೆ ಅವರು ಹೋಗಲಿ. ಎಲ್ಲಿಗೆ ಬೇಕಾದರೂ ಹೋಗಲಿ ನಮಗೆ ಆಕ್ಷೇಪಣೆ ಇಲ್ಲ. ಒಟ್ಟಿಗೆ ಇರಬೇಕು, ಸಾಮರಸ್ಯದಿಂದ ಇರಬೇಕು ಅಂತಲೇ ನಾವೂ ಬಯಸೋದು ಆಗುವುದಿಲ್ಲ ಅಂದರೆ ಹೋಗಿ ಎಂದಿದ್ದಾರೆ.
ಕೇಸ್ ಯಾರು ಬೇಕಾದರು ಹಾಕಬಹುದು. ಕೇಸ್ ಹಾಕಿ ಅದರಲ್ಲಿ ಏನು ತೀರ್ಪು ಆಗಿದೆ. ಈಗ ಆರೋಪಿ ಮಾತ್ರ ಅಪರಾಧಿಯಲ್ಲ. ನಾಳೆ ಇಲ್ಲಿ ಮಾತಾಡಿದ್ದಕ್ಕೆ ಹಿಜಾಬ್ ನ ಬಗ್ಗೆ ಮಾತಾಡಿದ್ರು ಅಂತ ಕೇಸ್ ಹಾಕಬಹುದು. ಹಾಕೋದಕ್ಕೆ ಏನು ತೊಂದರೆಯಿಲ್ಲ. ಕೋರ್ಟ್ ಒಪ್ಪಬೇಕಲ್ವಾ ಅದನ್ನ . ಮೋದಿಯವರ ಮೇಲೂ ಕೇಸ್ ಇದೆ, ಅಮಿತ್ ಶಾ ಮೇಲೂ ಕೇಸ್ ಇದೆ. ಅದಕ್ಕೆ ಅವರು ಅಪರಾಧಿಯ. ಕ್ರಿಮಿನಲ್ ಬ್ಯಾಗ್ರೌಂಡ್ ಇಲ್ಲ ನಮಿಗೆ ಎಂದಿದ್ದಾರೆ.