ಹುಬ್ಬಳ್ಳಿ: ರಾಜ್ಯದಲ್ಲಿ ಸದ್ಯಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆಯ ಕಾವು ಜೋರಾಗಿದೆ. ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕರಾಗಿದ್ದ ಸಿಪಿ ಯೋಗೀಶ್ವರ್ ಅವರು ಕಾಂಗ್ರೆಸ್ ಸೇರಿ, ಅಲ್ಲಿಂದಾನೇ ಸ್ಪರ್ಧೆಗೆ ಇಳಿದಿದ್ದಾರೆ. ಯೋಗೀಶ್ವರ್ ಕಾಂಗ್ರೆಸ್ ಬಂದಿದ್ದಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದರು. ಕಾಂಗ್ರೆಸ್ ನಲ್ಲಿ ಒಳ್ಳೆಯ ಸ್ಥಾನ ಸಿಗಲ್ಲ ಎಂದಿದ್ದರು. ಈಗಾಗಲೇ ಸವದಿ ಹೋಗಿದ್ದಾರೆ. ಅವರಿಗೆ ಯಾವ ಸ್ಥಾನ ಸಿಕ್ಕಿದೆ ನೋಡಿದ್ದೀರಲ್ಲ ಎಂದು ವ್ಯಂಗ್ಯವಾಡಿದ್ದರು. ಇದೀಗ ಅದೇ ಲಕ್ಷ್ಮಣ ಸವದಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಗೆ ಬಹಳ ಜನ ಬರುತ್ತಾರೆಂದು ಹುಬ್ಬಳ್ಳಿಯಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ನಶಿಸಿ ಹೋಗಲಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಲೆ ಇದ್ದಾರೆ. ಆದರೆ ಇನ್ನೂ ಮೂರು ವರ್ಷ ಅದನ್ನೇ ಹೇಳುತ್ತಾ ಇರುತ್ತಾರೆ. ಮುಂದಿನ ಐದು ವರ್ಷವೂ ಮತ್ತೆ ಅದೇ ಡೈಲಾಗ್ ಅನ್ನು ಹೇಳುತ್ತಾ ಇರುತ್ತಾರೆ.
ಕಾಂಗ್ರೆಸ್ ಗೆ ಬಹಳ ಜನ ಬರುತ್ತಾರೆ. ಆದರೆ ಜಾಗ ಕಲ್ಪಿಸುವುದು ಬಹಳ ಕಷ್ಟವಾಗುತ್ತಿದ್ದು, ಯಾವ ಯಾವ ಕ್ಷೇತ್ರ ಎಂಬುದನ್ನು ನೋಡಿಕೊಂಡು ಬಿಜೆಪಿ ನಾಯಕರನ್ನು ಕರೆದುಕೊಳ್ಳಬೇಕಿದೆ. ಬಿಜೆಪಿಯೊಂದು ಆರು ಬಾಗಿಲಾಗಿದೆ. ಅದು ಮನೆಯೊಂದು ಮೂರು ಬಾಗಿಲಲ್ಲ. ಆರು ಬಾಗಿಲಾಗಿದೆ. ಬಿಜೆಪಿಯಲ್ಲೂ ಹೇಳುವವರು ಇಲ್ಲ. ಕೇಳುವವರು ಯಾರು ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆದರೆ ಉಪಚುನಾವಣೆಯ ಹೊಸ್ತಿಲಲಲ್ಲಿ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ನಾಯಕರ ಕುರಿತು ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಯಾರಿರಬಹುದು ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರು ಉಪಚುನಾವಣೆಯ ಬ್ಯುಸಿಯಲ್ಲಿದ್ದಾರೆ.