ಕೇಂದ್ರದಲ್ಲಿ ಕುಮಾರಸ್ವಾಮಿ ಮಂತ್ರಿಯಾದ್ರೆ ಕೃಷಿ ಖಾತೆಯನ್ನೇ ಕೇಳುತ್ತಾರಂತೆ..!

 

ಬೆಂಗಳೂರು : ಕಡೆಗೂ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಜೊತೆಗೆ ಕೈಜೋಡಿಸಿ, ತಮ್ಮ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ ದಳಪತಿಗಳು. ಮೂರಕ್ಕೆ ಮೂರು ಸ್ಥಾನ ಗೆಲ್ಲುವ ಭರವಸೆ ಇತ್ತು. ಆದರೆ ಹಾಸನದ ಪೆನ್ ಡ್ರೈವ್ ಪ್ರಕರಣದಿಂದಾಗಿ ಹಾಸನ ಜೆಡಿಎಸ್ ನಿಂದ ಕೈ ತಪ್ಪಿತು. ಕಳೆದ ಬಾರಿ ಮಂಡ್ಯ ಕಳೆದುಕೊಂಡಿದ್ದ ಜೆಡಿಎಸ್, ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಕುಮಾರಸ್ವಾಮಿ ಗೆದ್ದು ಬೀಗಿದ್ದಾರೆ.

ಈ ಬಾರಿ ಬಿಜೆಪಿ ಜೊತೆಗೆ ಕೈ ಜೋಡಿಸಿದ್ದರಿಂದ ಕುಮಾರಸ್ವಾಮಿ ಗೆಲುವು ಕಂಡರೆ ಖಂಡಿತಾ ಕೇಂದ್ರ ಸಚಿವರಾಗುತ್ತಾರೆ ಎಂಬ ಮಾತಿತ್ತು. ಇದೀಗ ಅದರಂತೆ ಬಾರೀ ಮತದ ಅಂತರದಿಂದ ಕುಮಾರಸ್ವಾಮಿ ಗೆದ್ದಿದ್ದಾರೆ. ಇಂದಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬರುವಾಗ ಸಿಹಿ ಸುದ್ದಿಯನ್ನೇ ಹೊತ್ತು ಬರಲಿದ್ದಾರೆ ಎನ್ನಬಹುದು. ಕಳೆದ ಬಾರಿಗಿಂತ ಈ ಬಾರಿ ಜೆಡಿಎಸ್ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ಬಾರಿ ಕೇಂದ್ರ ಸಚಿವರಾಗಲಿದ್ದಾರೆ. ಒಂದು ವೇಳೆ ಕೇಂದ್ರ ಸಚಿವರಾದರೆ ಕುಮಾರಸ್ವಾಮಿ ಕೃಷಿ ಖಾತೆಗೆ ಡಿಮ್ಯಾಂಡ್ ಇಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ದೆಹಲಿಯಿಂದ ಬಂದ ಬಳಿಕ ಏನೆಲ್ಲಾ ಚರ್ಚೆಯಾಗಿರಬಹುದು ಎಂಬುದು ತಿಳಿಯಲಿದೆ.

ಈ ಬಾರಿಯ ಲೋಕಸಭಾ ಚುಬಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲವಾದ ಕಾರಣ, ಸರಳ ಬಹುಮತ ಪಡೆದಿರುವ ಎನ್‌ಡಿಎ ಪಕ್ಷವೇ ಸರ್ಕಾರ ರಚನೆ ಮಾಡಲಿದೆ. ಮೋದಿ ಅವರ ಹ್ಯಾಟ್ರಿಕ್ ಕನಸು ನನಸಾಗುತ್ತಿದೆ. ಹೀಗಾಗಿ ಬಿಜೆಪಿ ಸರ್ಕಾರ ರಚನೆ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿಯನ್ನು ನಡೆಸಿಕೊಳ್ಳುತ್ತಿದೆ. ಗೆಲುವು ಕಂಡ ಬೆನ್ನಲ್ಲೇ ಕುಮಾರಸ್ವಾಮಿ ಕೂಡ ದೆಹಲಿ‌ಗೆ ಪ್ಲೈಟ್ ಹತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *