ಕಾಯಕ ಪ್ರಜ್ಞೆ ಮೈಗೂಡಿಸಿಕೊಂಡರೆ ಬಸವ ತತ್ವ ಪಾಲಿಸಿದಂತೆ : ಸಂಸದ ಗೋವಿಂದ ಕಾರಜೋಳ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ. ಫೆ. 25 : ಮಾನವ ಹುಟ್ಟಿನ ಉದ್ದೇಶ, ಇರುವಿಕೆಯ ಉದ್ದೇಶ ಮುಕ್ತಿಯಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಡಾ.ನಿರ್ಮಲಾನಂದಸ್ವಾಮಿ ತಿಳಿಸಿದ್ದಾರೆ.

ನಗರದ ಕಬೀರಾನಂದ ನಗರದಲ್ಲಿ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ  95ನೇ ಮಹಾ ಶಿವರಾತ್ರಿ ಮಹೋತ್ಸವದ ಮೂರನೇ ದಿನದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮುಕ್ತಿಯನ್ನು ಪಡೆಯಲು ಹೋಗಲು ಮೂರು ವ್ಯವಸ್ಥೆಗಳಿವೆ ದೈತ ಪರಂಪರೆ, ವಿಶಿಷ್ಟ ಅದೈತ್ವ ಪರಂಪರೆ, ಅದೈತ್ವ ಪರಂಪರೆಗಳಾಗಿವೆ. ಸಿದ್ದಾರೂಢ ಸಂಪ್ರಾಯದಲ್ಲಿ ಬರುವ ಎಲ್ಲಾ ಮಠಗಳು ಸಹಾ ಅದೈತ್ವ ಆಶ್ರಮವಾಗಿದೆ. ಅದೈತ್ವದಲ್ಲಿ ಸುಮ್ಮನೆ ಇರುವುದು ಅಥವಾ ಮಾತಿಲ್ಲದಿರುವುದು ಆಗಿದೆ. ಆದೈತ್ವ ಸ್ಥಿತಿಗೆ ಬರುವ ಸಾಧಕ ಉತ್ತರದಲ್ಲಿ ಹೇಳಿದ ಕ್ರಿಯೇಯೇ ಸ್ವಂತ ಹಂತದಲ್ಲಿ ನಡೆಯುವ ಕ್ರಿಯೆಯಾಗಿದೆ ಎಂದರು.

ಜ್ಞಾನದ ನುಡಿಗಳನ್ನು ಹೇಳುವ ರೀತಿಯಲ್ಲಿ ಹೇಳಿದ್ದೇ ಆದರೆ, ನುಡಿಯನ್ನು ಬಳಸುವ ರೀತಿಯಲ್ಲಿ ಬಳಸಿದ್ದೇ ಆದರೆ, ಕೇಳುವ ರೀತಿಯಲ್ಲಿ ಕೇಳಿದ್ದೆ ಆದರೆ, ಅದನ್ನು ಅನುಷ್ಠಾನ ಮಾಡುವ ರೀತಿಯಲ್ಲಿ ಮಾಡಿದ್ದೇ ಆದರೆ, ಶಿವರಾತ್ರಿಯಂದು ಶ್ರೀಗಳು ಹಲವಾರು ಸಂತರನ್ನು ಕರೆಯಿಸಿ ಅವರಿಂದ ಭಕ್ತರಿಗೆ ಉಪದೇಶವನ್ನು ಕೊಡಿಸುವುದರ ಮೂಲಕ ಶಿವ ದರ್ಶನವನ್ನು ಮಾಡಿಸುತ್ತಿದ್ದಾರೆ. ಶಿವರಾತ್ರಿಯು ಸುತ್ತಾ-ಮುತ್ತಲ ದಿನದಲ್ಲಿ ವಿಶ್ವ ಚೈತನ್ಯ ಶಕ್ತಿ ಎನ್ನುವುದು ಎತ್ತರದಲ್ಲಿ ಇರುತ್ತದೆ. ವರ್ಷದ ಒಂದು ದಿನ ಶಿವರಾತ್ರಿಯಂದು ಸುತ್ತ-ಮುತ್ತಲ್ಲಿನ ದಿನದಲ್ಲಿ ಈ ರೀತಿಯಾದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಭಕ್ತರಿಗೆ ಶಿವನ ಕರುಣೆಯನ್ನು ತೋರಿಸಬೇಕಿದೆ ಎಂದರು.

ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಮುಂದೆ ಹಸಿವಿನ ಮಹತ್ವ ತಿಳಿಯುವುದಿಲ್ಲ, ವರ್ಷಕ್ಕೆ ಒಮ್ಮೆಯಾದರೂ ದೇವರ ಹೆಸರಿನಲ್ಲಿ ಉಪವಾಸವನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ ಇದರಿಂದಲೇ ಶಿವರಾತ್ರಿಯನ್ನು ನಮ್ಮ ಹಿರಿಯರು ಪದ್ದತಿಯಾಗಿ ಮಾಡಿದರು. ನಮ್ಮಲ್ಲಿ ಆಧ್ಮಾತ್ಮಿಕವಾದ ಚಿಂತನೆ ಹೆಚ್ಚಾಗಬೇಕಿದೆ. ಇದು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಪಡೆಯಬಹುದಾಗಿದೆ ಎಂದರು.

ಸಂಸದರಾದ ಗೋವಿಂದ ಕಾರಜೋಳ ರವರು ಮಾತನಾಡಿ, 12ನೇ ಶತಮಾನದಲ್ಲಿ ಜನರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಹೊಸದಾದ ವ್ಯವಸ್ಥೆಯನ್ನು ಹುಟ್ಟು ಹಾಕಲಾಯಿತು. ಅಂದಿನ ಕಾಲದ ಆಶ್ರಮಗಳು ಇಂದಿನ ಕಾಲದ ಮಠಗಳಾಗಿ ರೂಪುಗೊಂಡಿವೆ, ಕಾಯಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಬಸವ ತತ್ವವನ್ನು ಪಾಲಿಸಿದಂತೆ ಆಗುತ್ತದೆ. ಶಿವರಾತ್ರಿ ಭಕ್ತಿಯ ಆಚರಣೆಯಾಗಿದೆ. ಇದರಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಶಿವನ ಕೃಪೆಗೆ ಪಾತ್ರರಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಉದಯಚಲದ ಶ್ರೀ ಸದ್ಗುರು ಸೇವಾಶ್ರಮ ಟ್ರಸ್ಟ್‍ನ ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತಿ ಶ್ರೀಗಳು, ಐಜಿಪಿ ರವಿಕಾಂತೇಗೌಡ, ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿ, ನಿವೃತ್ತ ಐಎಎಸ್ ಅಧಿಕಾರಿ ಭೀಮಯ್ಯ, ನಿವೃತ್ತ ನಿರ್ದೆಶಕರಾಧ ಶ್ರೀಮತಿ ಕಮಲಮ್ಮ, ಬಿಜೆಪಿ ಯುವ ಮುಖಂಡರಾಧ ಅನಿತ್ ಕುಮಾರ್, ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ್.ಸುಂದೀಪ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಿ.ಟಿ.ಸುರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಜಯ್ಯಣ್ಣ, ಬಿಜೆಪಿ ನಗರಾಧ್ಯಕ್ಷರಾದ ಲೋಕೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಚೇತನಬಾಬು, ಕುಮಾರಗೌಡ, 95ನೇ ಮಹಾ ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ಭಾಗವಹಿಸಿದ್ದರು.

ಸುಬ್ರಾಯ ಭಟ್ಟರು ವೇಧ ಘೋಷ ಮಾಡಿದರೆ ಪ್ರಜ್ವಲ್ ಪ್ರಾರ್ಥಿಸಿದರು, ಮಂಜುನಾಥ್ ಗುಪ್ತ ಸ್ವಾಗತಿಸಿದರು ಹುರಳಿ ಬಸವರಾಜು ಕಾರ್ಯಕ್ರಮ ನಿರೂಪಿಸಿದರು. ಜಾನಪದ ಗಾಯಕಿ ಶ್ರೀಮತಿ ಸವಿತಕ್ಕ ಮತ್ತು ತಂಡದಿಂದ ಭಕ್ತಿ ಜಾನಪದ ಶಿವರಾತ್ರಿ ಕಾರ್ಯಕ್ರಮ ನಡೆಯಿತು.

 

=====================================================

ಚಿತ್ರದುರ್ಗ ಫೆ 25

 

ಚಿತ್ರದುರ್ಗ ತಾಲ್ಲೂಕು, ಜಾಲಿಕಟ್ಟೆ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಣಿಕಂಠ ಯುವಕರ ಸೇವಾ ಸಂಘ (ರಿ.) ಶ್ರೀ ವಿನಾಯಕ ಗೆಳೆಯರ ಬಳಗ ಮತ್ತು ಗ್ರಾಮಸ್ಥರಿಂದ 11ನೇ ವರ್ಷದ ಶ್ರೀ ವೀರಭದ್ರೇಶ್ವರ ಗುಗ್ಗುಳೋತ್ಸವ ಹಾಗೂ ಕೆಂಡಾರ್ಚನೆ ಕಾರ್ಯಕ್ರಮವೂ ಫೆ. 27 ರಂದು ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಕೋಶಾಧ್ಯಕ್ಷರಾದ ಸಿ.ರುದ್ರಪ್ಪ ಜಾಲಿಕಟ್ಟೆ ತಿಳಿಸಿದ್ದಾರೆ.

 

ಫೆ. 27ರ ಗುರುವಾರ ಬೆಳಿಗ್ಗೆ 5.00 ಗಂಟೆಗೆ “ಶ್ರೀ ಈಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಆಂಜನೇಯಸ್ವಾಮಿ ಅಭಿಷೇಕ” ಬೆಳಿಗ್ಗೆ 6.ರಿಂದ ಹೊಳಲ್ಕೆರೆ ತಾಲ್ಲೂಕು, ಕಡೂರು, ಕಲಾತಂಡದವರಿಂದ ‘ವೀರಗಾಸೆ’ ಇವರಿಂದ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಶ್ರೀ ವೀರಭದ್ರೇಶ್ವರ ಗುಗ್ಗುಳೋತ್ಸವ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಈಶ್ವರ ದೇವಸ್ಥಾನದ ಹತ್ತಿರ “ಕೆಂಡಾರ್ಚನೆ” ನಂತರ 1.00 ಗಂಟೆಯಿಂದ “ಪ್ರಸಾದ ವಿನಿಯೋಗ” ಕಾರ್ಯಕ್ರಮ ನಡೆಯಲಿದೆ. ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಕಲ ಬಂಧುಗಳು, ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *