ಸುದ್ದಿಒನ್, ಹೊಸದುರ್ಗ, ನವೆಂಬರ್.02 :ಕನ್ನಡವನ್ನು ನಾವು ನಿತ್ಯ ಬಳಸಿದರೆ ಸಾಕು ತಂತಾನೆ ಅದು ಬೆಳೆಯುತ್ತದೆ ಮತ್ತು ಉಳಿಯುತ್ತೆದೆ” ಎಂದು ಸಮಾಜ ಸೇವಕ ದಿಲ್ಸೆ ದಿಲೀಪ್ ಗುರುಸ್ವಾಮಿಯವರು ಹೇಳಿದರು.
ಕನ್ನಡವನ್ನು ನಿತ್ಯ ಬಳಸಿದರೆ ಸಾಕು ತಂತಾನೆ ಅದು ಬೆಳೆಯುತ್ತದೆ ಮತ್ತು ಉಳಿಯುತ್ತೆದೆ : ಸಮಾಜ ಸೇವಕ ದಿಲ್ಸೆ ದಿಲೀಪ್ pic.twitter.com/EzXTNB7QdT
— suddione-kannada News (@suddione) November 2, 2023
ಪಟ್ಟಣದ ಗಾಂಧಿ ವೃತ್ತದಲ್ಲಿ ಗಾಂಧಿ ಸರ್ಕಲ್ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ್ದ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆಯನ್ನು ಬೆಳೆಸುತ್ತೇವೆ, ಉಳಿಸುತ್ತೇವೆ ಎನ್ನುತ್ತಾರೆ. ಆದರೆ ಕನ್ನಡ ಭಾಷೆ ನೂರಾರು ವರ್ಷಗಳಿಂದ ಹೆಮ್ಮರವಾಗಿ ಬೆಳೆದು ನಿಂತಿದೆ. ನಾವೆಲ್ಲರೂ ಆ ಭಾಷೆಯನ್ನು ಬಳಸಿದರೆ ಸಾಕು. ಅಷ್ಟೇ ಅಲ್ಲದೇ ಪ್ರತಿ ವರ್ಷ ನಡೆಯುವ ಕನ್ನಡ ರಾಜ್ಯೋತ್ಸವವ ಸಮಾರಂಭದಲ್ಲಿ ನಾವಷ್ಟೇ ಅಲ್ಲದೇ ಅನ್ಯ ಭಾಷೆಯ ಜನರನ್ನು ಕರೆತಂದು ಅವರಿಗೂ ನಮ್ಮ ಕನ್ನಡ ಕಲಿಸೋಣ ಆ ಮೂಲಕ ಕನ್ನಡವನ್ನು ಬೆಳೆಸೋಣ ಎಂದು ಸ್ಪೂರ್ತಿದಾಯಕ ಮಾತಿಗಳನ್ನಾಡಿ ನೆರೆದಿದ್ದವರಲ್ಲಿ ಭಾಷಾ ಅಭಿಮಾನವನ್ನು ಮತ್ತಷ್ಟು ಹೆಚ್ಚುಸುವಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿ.ಪಿ. ಓಂಕರಪ್ಪನವರು, ವೀರಭದ್ರಪ್ಪನವರು, ಮೈಲಾರಪ್ಪನವರು, ಸಾಯಿ ಕಿಡ್ಸ್ ನವೀನ್, ಗುರುಸಿರಿವಂತ, ಇಟ್ಟಿಗೆ ನಾಗರಾಜ್, ಎಸ್ ಆರ್ ಬಸ್ ಗೋಪಾಲಣ್ಣನವರು, ಸನ್ಮತಿ ಜೈನ ಮತ್ತು ಅನೇಕ ಆಟೋ ಮಾಲೀಕರು ಚಾಲಕರು, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.