ಕನಕದಾಸರ ತತ್ವ ಮತ್ತು ಆದರ್ಶಗಳನ್ನು ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ : ಓಂಕಾರಪ್ಪ

2 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ಕನಕದಾಸರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ, ಸಮಾಜದಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದಂತಹ ಕನಕದಾಸರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಾವು ಎಲ್ಲಾ ಸಮಾಜದೊಂದಿಗೆ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡೋಣ ಎಂದು ಚಿತ್ರದುರ್ಗ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಓಂಕಾರಪ್ಪ ಹೇಳಿದರು.

ಚಿತ್ರದುರ್ಗ ನಗರದ ರಂಗಯ್ಯನಬಾಗಿಲು ಬಳಿ ಇರುವ ಕನಕಗುರುಪೀಠ ಶಾಖಾಮಠದಲ್ಲಿ ತಾಲೂಕು ಕುರುಬರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕನಕ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ಕನಕದಾಸರ ಜಯಂತಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನರನ್ನು ಕರೆಸಿ ಅದ್ದೂರಿ ಮೆರವಣಿಗೆ ಮಾಡಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಎಲ್ಲರೂ ಸಹಕರಿಸಲು ಮನವಿ ಮಾಡಿದರು. ಗ್ರಾಮೀಣ ಜನರ ಸಮಸ್ಯೆಯನ್ನು ಆಲಿಸುವ ಕಾರ್ಯವಾಗಬೇಕು. ಪ್ರತಿಭಾವಂತರು, ಸಾಧಕರನ್ನು ಗೌರವಿಸುವುದು, ಇತಿಹಾಸದ ಮಹತ್ವದ ಸಾರುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷರಾದ ಹೆಚ್. ಮಂಜಪ್ಪ ಮಾತನಾಡಿ, ಎಲ್ಲಾ ಸಮಾಜದಲ್ಲಿಯೂ ಸಮಸ್ಯೆ ಸಹಜ, ಅದರಂತೆ ಕುರುಬರ ಸಮಾಜ, ಸಂಘಟನೆಯಲ್ಲಿಯೂ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸೋಣ. ಹೊಸ ಅಭಿವೃದ್ಧಿ ಕಾರ್ಯ ಮಾಡೋಣ ತಾಲೂಕು ಅಧ್ಯಕ್ಷರಾದ ಓಂಕಾರಪ್ಪ ಅವರು ಹೊಸ ತಂಡ ಕಟ್ಟಿ ಕೆಲಸ ಮಾಡಲು ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು.

ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಯೋಗೀಶ್ ಸಹ್ಯಾದ್ರಿ ಮಾತನಾಡಿ, ಯಾವುದೇ ಸಮಾಜ ಹಾಗು ಸಮುದಾಯಗಳ ಅಭಿವೃದ್ಧಿಯಾಗಲು ಒಗ್ಗಟ್ಟು ಬಹಳ ಮುಖ್ಯವಾಗುತ್ತದೆ. ಕುರುಬ ಸಮಾಜದ ಬೆಳವಣಿಗೆಗೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಕನಕದಾಸರಂತಹ ಮಹನೀಯರ ಅರ್ಥಪೂರ್ಣ ಜಯಂತಿಗಳ ಮೂಲಕ ಯುವ ಸಮುದಾಯಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆಯಾದವು. ತಾಲೂಕು ಗೌರವಾಧ್ಯಕ್ಷ ಲೋಕೇಶಪ್ಪ, ಉಪಾಧ್ಯಕ್ಷ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ನಿಶಾನಿ ಶಂಕರ್, ಬುಡಕಟ್ಟು ಸಂಶೋಧಕ ಮಾಲತೇಶ್ ಅರಸ್ ಮಾತನಾಡಿದರು.

ಸಭೆಯಲ್ಲಿ ಹಿರಿಯ ಉಪಾಧ್ಯಕ್ಷರಾದ ಸಜ್ಜನಕೆರೆ ರಾಜಣ್ಣ, ಉಮೇಶ್ ಡಿ, ನಿರ್ದೇಶಕರಾದ ಪ್ರೇಮ್ ಕುಮಾರ್, ಲೋಕೇಶ್, ಎಸ್ ಬಿ ಎಲ್ ನಾಗರಾಜ್, ತಾಲೂಕು ಕೆಡಿಪಿ ಸದಸ್ಯ ಸಂತೋಷ್, ವಕೀಲ ಹೇಮಕೃಷ್ಣ, ಹಿರಿಯ ಮುಖಂಡ ಲಕ್ಷ್ಮಣ್, ಕೆಂಚಪ್ಪ ನೆರೆನಾಳ್, ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *