Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರ್ಪಡೆ ಮಾಡದಿದ್ದರೆ ಬಿಜೆಪಿ ವಿರುದ್ದ ಶಕ್ತಿ ಪ್ರದರ್ಶನ : ಶಿವುಯಾದವ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                      ಮೊ :  8722022817

ಸುದ್ದಿಒನ್, ಚಿತ್ರದುರ್ಗ, ಫೆ. 04 :  ರಾಜ್ಯ ಸರ್ಕಾರ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವಂತೆ ಕಳೆದ 2014ರಲ್ಲಿ ಶಿಫಾರಸ್ಸು ಮಾಡಿತ್ತು ಆದರೆ ಕೇಂದ್ರ ಸರ್ಕಾರ 10 ವರ್ಷ ಕಳೆದರೂ ಸಹಾ ಅದನ್ನು ಜಾರಿ ಮಾಡಿಲ್ಲ ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ಮಾಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಡುಗೊಲ್ಲರು ತಮ್ಮ ಶಕ್ತಿಯನ್ನು ಬಿಜೆಪಿ ವಿರುದ್ದ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷರಾದ ಶಿವುಯಾದವ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವಂತೆ ಅನ್ನಪೂರ್ಣಮ್ಮ ವರದಿಯನ್ನು ನೀಡಿತ್ತು ಅದರಂತೆ ಕುಲಶಾಸ್ತ್ರಿ ಅಧ್ಯಯನವೂ ಸಹಾ ಆಗಿತ್ತು ಕಾಡುಗೊಲ್ಲ ಜನಾಂಗ ಎಸ್.ಟಿ.ಗೆ ಸೇರ್ಪಡೆಯಾಗುವ ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದೆ ಆದರೆ ಕೇಂದ್ರ ಸರ್ಕಾರವು ಕಾಡುಗೊಲ್ಲ ಜನಾಂಗವನ್ನು ಎಸ್,ಟಿ.ಗೆ ಸೇರಿಸುವುದಾಗಿ ಭರವಸೆಯನ್ನು ನೀಡಿತ್ತು ಆದರೆ ಅದನ್ನು ಇದುವರೆವಿಗೂ ಈಡೇರಿಸಿಲ್ಲ ಈಗ ಕೇಂದ್ರ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೇ ಇದ್ದಲ್ಲದೆ ಈಗ ಅಧಿವೇಶನ ನಡೆಯುತ್ತಿದೆ ಈ ಸಮಯದಲ್ಲಿ ಕಾಡುಗೊಲ್ಲರ ಬಗ್ಗೆ ಸಂಸತ್‍ನಲ್ಲಿ ಚರ್ಚೆಯಾಗಿ ನಮ್ಮನ್ನು ಎಸ್.ಟಿ.ಗೆ ಸೇರ್ಪಡೆಯಾಗುವಂತೆ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ ಎಂದರು.

ಕಳೆದ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಜನಾಂಗವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವುದಾಗಿ ಭರವಸೆಯನ್ನು ನೀಡಿತ್ತು ಇದರಂತೆ ರಾಜ್ಯ ಸರ್ಕಾರವೂ ಸಹಾ 2014ರಲ್ಲಿಯೇ ಕಾಡುಗೊಲ್ಲ ಜನಾಂಗವನ್ನು ಎಸ್.ಟಿ.ಗೆ ಸೇರಿಸುವಂತೆ ಶಿಫಾರಸ್ಸು ಮಾಡಿತ್ತು ಆದರೆ ಕೇಂದ್ರ ಸರ್ಕಾರಕ್ಕೆ ಹೋದ ಫೈಲು ಒಂದು ಇಂಚು ಸಹಾ ಸರಿದಿಲ್ಲ ಎಲ್ಲಿ ಇದೇಯೇ ಅಲ್ಲಿಯೇ ಇದೆ ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಮಂತ್ರಿಗಳಿಗೆ ಮನವಿಯನ್ನು ಸಹ ಮಾಡಲಾಗಿತ್ತಾದರೂ ಏನು ಪ್ರಯೋಜನವಾಗಿಲ್ಲ ಎಂದ ಅವರು,  ಈಗ ಕೇಂದ್ರ ಸರ್ಕಾರದ ಅಧಿವೇಶನ ನಡೆಯುತ್ತಿದೆ, ಇದರಲ್ಲಿ ನಮ್ಮ ಜನಾಂಗದವರನ್ನು ಎಸ್.ಟಿ.ಗೆ ಸೇರಿಸುವ ಬಗ್ಗೆ ಚರ್ಚೆ ನಡೆದು ಸೇರಿಸುವ ಕಾರ್ಯವನ್ನು ಮಾಡಬೇಕಿದೆ ಇಲ್ಲವಾದಲ್ಲಿ ಕಳೆದ ವಿಧಾನಸಭೆಯಲ್ಲಿ ಕಾಡುಗೊಲ್ಲರು ಬಿಜೆಪಿಯ ಬಗ್ಗೆ ತೆಗೆದುಕೊಂಡ ನಿರ್ಣಯವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಗೆದುಕೊಳ್ಳಲಾಗುವುದು ಈ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ಇದಕ್ಕೆ ಆಸ್ಪಂದ ನೀಡದೇ ಈ ಅಧಿವೇಶನದಲ್ಲಿ ನಮ್ಮ ಜನಾಂಗದ ಬಗ್ಗೆ ನಿರ್ಣಯವನ್ನು ಮಾಡಿ ಎಸ್.ಟಿ.ಗೆ ಸೇರಿಸುವ ಕಾರ್ಯವನ್ನು ಮಾಡಬೇಕು ಎಂದು ಶಿವುಯಾದವ್ ಒತ್ತಾಯಿಸಿದರು.

ಚಿತ್ರದುರ್ಗ ಕ್ಷೇತ್ರದ ಸಂಸದರು ಸಚಿವರಾದ ನಾರಾಯಣಸ್ವಾಮಿಯವರು ಇದರ ಬಗ್ಗೆ ಐಆವ ಮಾತನ್ನು ಸಹಾ ಆಡುತ್ತಿಲ್ಲ, ನಮ್ಮ ಜನಾಂಗವನ್ನು ಎಸ್.ಟಿ.ಗೆ ಸೇರಿಸುವಂತೆ ಮನವಿಯನ್ನು ಮಾಡಲಾಗಿತ್ತು ಆದರೆ ಅವರು ಇದರುವರೆವಿಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಇದರ ಬಗ್ಗೆ ಅಧಿವೇಶನದಲ್ಲಿಯೂ ಸಹಾ ಮಾತನಾಡಿಲ್ಲ ಎಂದು ಸಚಿವರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ ಶಿವುಯಾದವ್,  ಬಿಜೆಪಿ ಈ ಬಾರಿಯ ಅಧಿವೇಶನದಲ್ಲಿ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತಗಳನ್ನು ಕೇಳಲು ಹಟ್ಟಿಗಳ ಬಳಿ ಯಾವ ಮುಖಂಡರು ಬರಬೇಡಿ ಎಂದು ಕಟುವಾಗಿ ಹೇಳಿದರು.

ಗೋಷ್ಠಿಯಲ್ಲಿ ಕಾಡುಗೊಲ್ಲ ಕ್ಷೇಮಾಭೀವೃದ್ದಿ ಸಂಘದ ಜಿಲ್ಲಾಧ್ಯಕ್ಷರಾದ ಶಿವಣ್ಣ, ಕಾರ್ಯಧ್ಯಕ್ಷರಾದ ಕದರಪ್ಪ, ಉಪಾಧ್ಯಕ್ಷರಾದ ತಿಮ್ಮೇಶ್, ಜಗದೀಶ್, ಹರೀಶ್ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಾವಣಗೆರೆ, ಶಿರಸಿಯಲ್ಲಿ ಮೋದಿ ಮತಬೇಟೆ : ಬೆಳಗಾವಿಯಿಂದ ಆರಂಭ

ಬೆಳಗಾವಿ: ಈಗಾಗಲೇ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಜನತೆ ರೆಡಿಯಾಗಿದ್ದಾರೆ. ಈಗಾಗಲೇ ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ನಾಳೆಯೂ ರಾಜ್ಯ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ವಿಶೇಷ ತನಿಖಾ ತಂಡ ರಚನೆಗೆ ಸಿಎಂ ನಿರ್ಧಾರ

ಬೆಂಗಳೂರು: ಹಾಸನದಲ್ಲಿ ಕಳೆದ ಕೆಲವು ದಿನಗಳಿಂದ ಪೆನ್ ಡ್ರೈವ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆ ಪೆನ್ ಡ್ರೈವ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಇರುವುದು ಬೆಳಕಿಗೆ ಬಂದಿದೆ. ಅದು ಒಂದಲ್ಲ ಎರಡಲ್ಲ ಸಾವಿರಾರು

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

error: Content is protected !!