Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಜೆಡಿಎಸ್ 113 ಸೀಟ್ ಗೆದ್ದರೆ ಕುಮಾರಸ್ವಾಮಿ ಸಿಎಂ : ಜೆಡಿಎಸ್ – ಬಿಜೆಪಿ ನಡುವೆ ಬಿರುಕು ಮೂಡೀತಾ..?

---Advertisement---

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನ ಎದುರಿಸುತ್ತಿವೆ. ಆದ್ರೆ ಕೆಲವೊಂದು ಹೇಳಿಕೆಗಳು ಮೈತ್ರಿಯಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಜೆಡಿಎಸ್ ಪಕ್ಷ 113 ಸೀಟ್ ಗಳನ್ನ ಗೆದ್ದರೆ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಬಹುದು. ಅದನ್ನ ತಡೆಯಲು ನಾವ್ಯಾರು ಅಂತ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಹಾಗೇ ಬಿಜೆಪಿ 113 ಗೆದ್ದರೆ ನಮ್ಮವರೇ ಸಿಎಂ ಆಗ್ತಾರೆ ಎಂದಿದ್ದಾರೆ. ಚಲವಾದಿ ನಾರಾಯಣಸ್ವಾಮಿ ಅವರ ಈ ಹೇಳಿಕೆ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೈತ್ರಿ ಅಂದ್ಮೇಲೆ ಅಪಸ್ವರಗಳು ಬರುವುದು ಸಹಜ. ವರಿಷ್ಠರು ಕುಳಿತುಕೊಂಡು ತೀರ್ಮಾನ ಮಾಡ್ತಾರೆ. ವರಿಷ್ಠರ ತೀರ್ಮಾನದಮನತೆ ಎಲ್ಲವೂ ನಡೆಯುತ್ತದೆ ಎಂಬ ಮಾತನ್ನ ಚಲವಾದಿ ನಾರಾಯಣಸ್ವಾಮಿ ಅವರು ಅವರ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.

ಪಾರ್ಲಿಮೆಂಟ್ ನಲ್ಲಿ ಅವರು ಅಲಿಯೆನ್ಸ್ ಮಾಡಿಕೊಂಡಿದ್ದರು. ಈ ಮೈತ್ರಿ ಯಾವುದನ್ನೇ ಆಗಲಿ ಕೇಂದ್ರದ ನಾಯಕರು ನಿರ್ಧಾರ ಮಾಡ್ತಾರೆ. ಜನತಾದಳ ನಮ್ಮನ್ನಾಗಲಿ, ನಾವೂ ಅವರನ್ನಾಗಲೀ ಯಾವುದೇ ರೀತಿಯಲ್ಲಿ ಮಾತನ್ನಾಡುವುದು ಸೂಕ್ತವಲ್ಲ. ನಾವೂ ಅವರನ್ನೆಷ್ಟು ಗೌರವಿಸ್ತಿವೋ ಅವರು ನಮ್ಮನ್ನು ಅಷ್ಟೇ ಗೌರವಿಸಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಟಿಕೆಟ್ ಯಾರು ಕೂಡ ಲೋಕಲ್ ನಲ್ಲಿ ಇಲ್ಲ. ಭಾರತೀಯ ಜನತಾ ಪಕ್ಷದ ಎಲ್ಲಾ ತೀರ್ಮಾನಗಳು ಮೇಲ್ಮಟ್ಟದಲ್ಲಿ ನಡೆಯುತ್ತವೆ. ಜನತಾ ದಳದ ವಿಚಾರಗಳು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಅವರ ಎತ್ತರದಲ್ಲಿ ಅವರು ನಡೆಸ್ತಾರೆ. ಯಾವುದೋ ಸಣ್ಣ ಪುಟ್ಟ ಸಮಸ್ಯೆಗಳನ್ನ ಇಟ್ಟುಕೊಂಡು ಸ್ಥಳೀಯವಾಗಿ ಇವರಿಗೆ ಟಿಕೆಟ್ ಅಂತ ಹೇಳುವುದು ಸರಿಯಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...