ಮಂಡ್ಯ : ಚುನಾವಣೆ ಎಂದಾಕ್ಷಣಾ ಮಂಡ್ಯ ಜಿಲ್ಲೆ ಬೇಗನೇ ನೆನಪಾಗುತ್ತದೆ. ಇದೀಗ ಲೋಕಸಭಾ ಚುನಾವಣೆಯ ಕಣವೂ ರಂಗೇರಿದೆ. ಎಲ್ಲರೂ ತಿರುಗಿ ನೋಡುವಂತಿರುವ ಮಂಡ್ಯದಲ್ಲಿ ಒಳ್ಳೆ ಸ್ಪರ್ಧೆ ಇಲ್ಲ ಅಂದರೆ ಹೇಗೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ ನಡುವೆ ಒಳ್ಳೆ ಫೈಟ್ ನಡೆದಿತ್ತು. ಆದರೆ ಕಡೆಗೆ ನಿಖಿಲ್ ಸೋತರು, ಸ್ವತಂತ್ರ ಅಭ್ಯರ್ಥಿಯಾಗಿದ್ದ ಸುಮಲತಾ ಗೆದ್ದರು. ಇದೀಗ ಮತ್ತೆ ಅದೇ ಮಂಡ್ಯ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಜೆಡಿಎಸ್ ಪಣ ತೊಟ್ಟಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುತ್ತಿವೆ. ಇದರಿಂದ ಹಲವರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯೂ ದಟ್ಟವಾಗಿದೆ. ಮಂಡ್ಯದಲ್ಲಿ ಸುಮಲತಾ ಸ್ವತಂತ್ರವಾಗಿಯೇ ಗೆದ್ದಿದ್ದರು. ಬಿಜೆಪಿಗೆ ಬೇರೆ ಸೇರ್ಪಡೆಯಾಗಿದ್ದಾರೆ. ದಳಪತಿಗಳು ಯಾವುದೇ ಕಾರಣಕ್ಕೂ ಮಂಡ್ಯ ಬಿಟ್ಟು ಕೊಡಲ್ಲ. ಹೀಗಾಗಿ ಸುಮಲತಾ ನಿರ್ಧಾರದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.
ಮಂಡ್ಯದಲ್ಲಿ ನಿಲ್ಲುತ್ತಾರಾ..? ಸ್ವತಂತ್ರ ಅಭ್ಯರ್ಥಿಯಾಗುತ್ತಾರಾ..? ಇಲ್ಲವೇ ಬೆಂಗಳೂರು ಉತ್ತರ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳುತ್ತಾರಾ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಕುತೂಹಲ ಮೂಡಿದೆ. ಮಂಡ್ಯದಿಂದ ಟಿಕೆಟ್ ಸಿಗದೆ ಹೋದಲ್ಲಿ ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಸುಮಲತಾ ಅವರು ಪತಿ ಅಂಬರೀಶ್ ಅವರ ಅಭಿಮಾನಿಗಳಿಗಾಗಿ ಮಂಡ್ಯ ಬಿಡುವುದು ಅನುಮಾನ ಎನ್ನಲಾಗಿದೆ. ಟಿಕೆಟ್ ಅನೌನ್ಸ್ ಆದಾಗ ಯಾರ ನಿರ್ಧಾರ ಏನಾಗಲಿದೆ ಎಂಬ ಸ್ಪಷ್ಟತೆ ಸಿಗಲಿದೆ.