ಗೌರವದಿಂದ ಇದ್ದರೆ ಸರಿ.. ಇಲ್ಲಂದ್ರೆ : ಬಿಜೆಪಿ ನಾಯಕರ ವಿರುದ್ದ ಡಿಕೆಶಿ ಗರಂ

1 Min Read

ಬೆಂಗಳೂರು: ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಬೆಂಗಳೂರಿನ ಕಸವನ್ನ ನಿಯಮಬಾಹಿರವಾಗಿ ಚಿಕ್ಕಬಳ್ಳಾಪುರಕ್ಕೆ ನಿಯಮಬಾಹಿರವಾಗಿ ಸಾಗಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಅಶೋಕ್, ವಿಜಯೇಂದ್ರ ಅವರ ಮನೆ ಮುಂದೆಯೇ ಕಸ ಹಾಕಿಸುತ್ತೇನೆ ಎಂದಿದ್ದಾರೆ.

ಬಿಜೆಪಿಯ ಎಲ್ಲಾ ಶಾಸಕರು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಸುಮ್ಮನೆ ಇದ್ದರೆ ಸರಿ. ಇಲ್ಲಂದ್ರೆ ಎಸ್ಮಾ ಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಅಂತ ಆಕ್ಸಿಡೆಂಟ್ ವಿಚಾರ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಎಲ್ಲರೂ ಗೌರವದಿಂದ ಇದ್ದರೆ ಸರಿ. ಇಲ್ಲದಿದ್ದರೆ ಕರುಣೆ ತೋರಿಸುವುದಿಲ್ಲ. ಎಸ್ಮಾ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕಸವನ್ನ ಎಲ್ಲಾದ್ರೂ ಒಂದು ಕಡೆ ಹಾಕಬೇಕಲ್ವಾ..? ಅಲ್ಲೂ ಬೇಡ, ಇಲ್ಲೂ ಬೇಡ ಅಂದರೆ ಎಲ್ಲಿಗೆ ಹೋಗಬೇಕು..?

ಈ ಕಸ ಅಶೋಕ್ ಮನೆಗೋ, ವಿಜಯೇಂದ್ರ ಮನೆಗೋ ಅಥವಾ ಬಿಜೆಪಿ ಆಫೀಸಿಗೆ ಹೋಗಬೇಕು. ನಿನ್ನೆ ಲಿಂಬಾವಳಿ ಪ್ರತಿಭಟನೆ ಮಾಡಿದ್ದಾರೆ. ಇವತ್ತು ಅವನು ದೊಡ್ಡಬಳಗಳಾಪುರ ಎಂಎಲ್ಎ ಮಾಡಿದ್ದಾನೆ. ಇವರೆಲ್ಲಾ ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಅಂತ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಸುಮ್ಮನೆ ಇರಲಿಲ್ಲ ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸ್ತೀನಿ. ಅಥವಾ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಿಸ್ತೀನಿ. ದೊಡ್ಡಬಳ್ಳಾಪುರದಲ್ಲಿ ಅಪಘಾತ ಆಗಬಾರದಿತ್ತು. ಆದರೆ ಆಗಿದೆ.‌ ಅದಕ್ಕೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ತಾರೆ ಎಂದಿದ್ದಾರೆ.‌ ಕಸದ ವಿಚಾರಕ್ಕೆ ಬಿಜೆಪಿ ನಾಯಕರ ಮಾತಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.

Share This Article
Enable Notifications OK No thanks