ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಬಹುಸಂಖ್ಯಾತರು ಶೋಷಣೆಯಿಂದ ಹೊರ ಬಂದಾಗ ಮಾತ್ರ ಈ ದೇಶದ ಸಂಪತ್ತನ್ನು ಅನುಭವಿಸಲು ಸಾಧ್ಯ ಎಂದು ಲೇಖಕ ಹೆಚ್.ಆನಂದ್‍ಕುಮಾರ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಈ ನೆಲದ ಬಹುತ್ವವನ್ನು ಎತ್ತಿ ಹಿಡಿದ ಸಂವಿಧಾನ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಗಾಟಿಸಿ ಮಾತನಾಡಿದರು.
ಬಹುತ್ವ ಭಾರತದಲ್ಲಿ ನೂರಾರು ಭಾಷೆ, ಸಾವಿರಾರು ಜಾತಿಗಳಿವೆ. ಬುಡಕಟ್ಟು ಸಂಸ್ಕøತಿಯುಳ್ಳ ದೇಶ ನಮ್ಮದು. ಬಹುಸಂಖ್ಯಾತರು ಬಲ ಪಂಥೀಯರ ಮಾತುಗಳನ್ನು ಕೇಳುವಂತಾಗಿರುವುದರಿಂದ ಇನ್ನು ಶೋಷಣೆ ಅನುಭವಿಸಬೇಕಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇರದಿದ್ದರೆ ಶೋಷಿತರ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಅತ್ಯಂತ ಶ್ರೀಮಂತ ದೇಶ ನಮ್ಮದು. ಮನುವಾದಿಗಳ ಕಾಟ ಜಾಸ್ತಿಯಾಗಿದೆ. ವಿದ್ವತ್ ಮಾನವ ಬುದ್ದ ಸಮಾನತೆಯ ಸಂದೇಶ ಸಾರಿದ್ದಾರೆ. ಬದುಕಿನಲ್ಲಿ ಸಮಸ್ಯೆಗಳು ಆವರಿಸಿಕೊಂಡಾಗ ಬಿಡಿಸಿಕೊಂಡು ಹೊರಬರುವ ಬುದ್ದಿವಂತಿಕೆ ಕಲಿಯಬೇಕೆಂದರು.
ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ನ್ಯಾಯವಾದಿ ರಮೇಶ್ ಎಂ. ಮಾತನಾಡಿ ಬಹುತ್ವ ಎನ್ನುವುದು ಗಂಭೀರ ಹಾಗೂ ಅವಶ್ಯಕವಾಗಿ ಚರ್ಚೆಯಾಗಬೇಕಿದೆ.
ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುತ್ವ ರಚನೆಯಾಗಿದೆ. ಅಂತಹ ಸಮಾಜವನ್ನು ಬಹುತ್ವ ಎಂದು ಕರೆಯಲಾಗುವುದು. ಬಹುತ್ವ ಮತ್ತು ಭಾಷೆ ಅಪಾಯದಲ್ಲಿದೆ. ಬಹುಸಂಖ್ಯಾತರ ಆಚಾರ, ವಿಚಾರ, ನಂಬಿಕೆಗೆ ಧಕ್ಕೆಯಾಗಿದೆ. ಸಹಿಷ್ಣತೆಯಿಲ್ಲದ ಸಮಾಜ ಸರ್ವಾಧಿಕಾರದ ಕಡೆ ಹೋಗುತ್ತದೆ. ಪುರೋಹಿತಶಾಹಿ, ಬ್ರಾಹ್ಮಣ್ಯ ವ್ಯವಸ್ಥೆಯಲ್ಲಿ ಬಹುತ್ವ ಹಾಳಾಗುತ್ತಿದೆ ಎಂದು ವಿಷಾಧಿಸಿದರು.
ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಆಕಾಶವಾಣಿ ಪ್ರಸಾರ ಭಾರತಿಯ ಡಾ.ನವೀನ್ ಮಸ್ಕಲ್, ಕರ್ನಾಟಕ ಬಂಜಾರ ಸೇವಾ ಸಂಘದ ಅಧ್ಯಕ್ಷ ಗಿರೀಶ್‍ನಾಯ್ಕ ಅಲೆಮಾರಿ ಮತ್ತು ಅರೆಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಎಸ್. ನ್ಯಾಯವಾದಿ ವಿಶ್ವಾನಂದ ವದ್ದಿಕೆರೆ, ಗುರುಮೂರ್ತಿ, ಮಹಲಿಂಗಪ್ಪ ಮರಿಕುಂಟೆ ಇನ್ನು ಅನೇಕರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.






