ಬೆಂಗಳೂರು: 2019ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಆದರೆ ಅದು ಹೆಚ್ಚು ಸಮಯ ಬದುಕಲಿಲ್ಲ. ಇದೀಗ ಈ ಬಾರಿಯ ಲೋಕಸಭಾ ಚುಮಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್ ವಾಕ್ಸಮರ ತಾರಕಕ್ಕೇರುತ್ತಲೆ ಇರುತ್ತದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಮೈತ್ರಿಯಾಗಿದ್ದಾಗಿನ ವಿಚಾರವೊಂದನ್ನ ತೆರೆದಿಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನನ್ನ ಸಿಎಂ ಮಾಡಿದ್ದರೆ ವಾಪಸ್ ತೆರಳುವುದಾಗಿ ಮುಂಬೈಗೆ ಹೋಗಿದ್ದ ಶಾಸಕರು ಹೇಳಿದ್ದರು. ಮುಂಬೈನಲ್ಲಿದ್ದ ಎಸ್ ಟಿ ಸೋಮಶೇಖರ್ ಹಾಗೂ ಗೋಪಾಲಯ್ಯ ಹೇಳಿದ್ದರು. ಅಂದಿನ ಸಿಎಂ ಕುಮಾರಸ್ವಾಮಿ ಅವರಿಗೆ ಕರೆ ಮಾಡಿಯೇ ಹೇಳಿದ್ದರು. ಡಿಕೆ ಶಿವಕುನಾರ್ ಅವರನ್ನು ಸಿಎಂ ಮಾಡಿದರೆ ವಾಪಾಸ್ ಬರುತ್ತೇವೆ ಎಂದು. ಆದರೆ ಆಗ ಶಾಸಕರ ಬೇಡಿಕೆ ಬಗ್ಗೆ ಕುಮಾರಸ್ವಾಮಿ ಬಾಯಿ ಬಿಡಲೇ ಇಲ್ಲ. ಆಗ ಬಾಯಿ ಬಿಡದ ಕುಮಾರಸ್ವಾಮಿ, ಈಗ ಬೇಕಿದ್ದರೆ 19 ಶಾಸಕರ ಬೆಂಬಲ ಕೊಡುತ್ತೀವಿ ಎನ್ನುತ್ತಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರ ಮಾತನ್ನು ಮಬುವುದಕ್ಕೆ ನಾವೇನು ದಡ್ಡರಾ..? ಎಂದಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ವಿಚಾರ ಆಗಾಗ ಚರ್ಚೆಗೆ ಬರುತ್ತಿದೆ. ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬೆಲ್ಲಾ ಚರ್ಚೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದರು. ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದರೆ ನಮ್ಮ ಶಾಸಕರು ಬೆಂಬಲ ನೀಡುತ್ತಾರೆ ಎಂದೇ ಹೇಳಿದ್ದರು.