ದಾವಣಗೆರೆ: ಸದ್ಯ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಆದರೆ ನಳಿನ್ ಕುಮಾರ್ ಕಟೀಲು ಸ್ಥಾನಕ್ಕೆ ತಾ ಮುಂದು ನಾ ಮುಂದು ಅನ್ನೊ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇದೀಗ ಎಂಪಿ ರೇಣುಕಾಚಾರ್ಯ ಅವರು ಕೂಡ ಮಾತನಾಡಿ, ನನಗೂ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೀನಿ ಎಂದಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ರೇಣುಕಾಚಾರ್ಯ ಅವರು, ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಗಿದ್ದು ಕೆಲವು ವ್ಯಕ್ತಿಗಳಿಂದ. ಪಕ್ಷದ ಒಳಗಿನ ಒಳ ಒಡೆತದಿಂದ ಸೋಲು ಕಂಡೆವು. ಇದರಿಂದಾನೇ ಕಾಂಗ್ರೆಸ್ ಗೆ ಲಾಭವಾಗಿದ್ದು. ಬಿಜೆಪಿ ರಾಜ್ಯಾಧ್ಯಕ್ಷನನ್ನು ಬದಲಾಯಿಸಬೇಕು. ಎಲ್ಲಾ ಧರ್ಮದವರನ್ನು ಇಟ್ಟುಗೆ ಕರೆದುಕೊಂಡು ಹೋಗುವಂತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಬೇಕು.
ಯಡಿಯೂರಪ್ಪರ ಪರ ಹಲವು ಬಾರಿ ಮಾತನಾಡಿದ್ದೇನೆ. ಸೈಕಲ್ ತುಳಿದು ಪಕ್ಷ ಕಟ್ಟಿದ್ದರು ಬಿಎಸ್ ವೈ. ಆದರೆ ಈಗ ಕೆಲವರು ಹೈಫೈ ಕಾರಿನಲ್ಲಿ ಓಡಾಡುತ್ತಾರೆ. ಶಿಕಾರಿಪುರದಲ್ಲಿ ಯಡಿಯೂರಪ್ಪರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಆದರೂ ಹೆದರಲಿಲ್ಲ. ಪಕ್ಷ ಕಟ್ಟಿದ್ದರು. ಇಬ್ಬರು ಶಾಸಕರಾಗಿದ್ದಾಗ ಒಬ್ಬರು ರಾಜೀನಾಮೆ ಕೊಟ್ಟು ಹೋದರು. ಆಗಲೂ ಯಡಿಯೂರಪ್ಪ ಅವರೂ ಪಕ್ಷ ಕಟ್ಟಿ ಸೈ ಎನಿಸಿಕೊಂಡ ಪ್ರಶ್ನಾತೀತ ನಾಯಕ. ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದಿದ್ದಾರೆ.