ಬೆಂಗಳೂರು: ಇತ್ತಿಚೆಗಷ್ಟೇ ಸಿ ಎಂ ಇಬ್ರಾಹಿಂ ಅವರನ್ನು ಜೆಡಿಎಸ್ ನಿಂದ ಅಮಾನತು ಮಾಡಿದ್ದಾರೆ. ಈ ಸಂಬಂಧ ಇದೀಗ ಇಬ್ರಾಹಿಂ ಅವರು ಗರಂ ಆಗಿದ್ದು, ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಹೆಚ್ ಡಿ ದೇವೇಗೌಡ ಅವರು ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ, ಇಲ್ಲವೋ ಎಂಬುದೇ ಅನುಮಾನವಿದೆ. ಈ ಬಗ್ಗೆ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧಾರ ಮಾಡಲಿದೆ. ನಾನೂ ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ. ಮಗನಿಗಾಗಿ ಈ ಥರ ಮಾಡುವುದು ಸರಿಯಲ್ಲ. ನಿರ್ಣಯವನ್ನು ವಾಪಾಸ್ ಪಡೆಯಿರಿ ಎಂದು ಈಗಲೂ ಮನವಿ ಮಾಡುತ್ತೇವೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮಾಡಿ, ದೇವೇಗೌಡರನ್ನು ರಾಷ್ಟ್ರೀಯ ತೆಗೆದು ಹಾಕಿದರೆ ಏನು ಮಾಡುತ್ತೀರಿ..?ಅಮಾನತು ಮಾಡುವ ಬಗ್ಗೆ ನನಗೆ ನೋಟೀಸ್ ಕೊಟ್ಟಿಲ್ಲ. ನಾನೇನು ಅವರ ಮನೆ ಕೆಲಸದವನಾ..? ಏನು ಇವರ ಹುಚ್ಚಾಟ. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಅಮಾನತು ಮಾಡಲು ನನಗೇನು ನೋಟೀಸ್ ಕೊಟ್ಟಿದ್ದಾರಾ..? ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಮೊದಲ ತಪ್ಪು. ಎಲ್ಲೋ ರೆಸಾರ್ಟ್ ನಲ್ಲಿ 8 ರಿಂದ 10 ಜನ ಸಭೆ ಮಾಡುವುದಲ್ಲ. ನ್ಯಾಷನಲ್ ಕೌನ್ಸಿಲ್ ಮೆಂಬರ್ ನಲ್ಲಿ ಇವರ ಮನೆಯವರೇ 26 ಜನ ಇದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿ ಎಂ ಇಬ್ರಾಹಿಂ ಅವರು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿದ್ದರು. ಒರಿಜಿನಲ್ ಜೆಡಿಎಸ್ ನಮ್ಮದೆ. ಕುಮಾರಸ್ವಾಮಿ ಅವರನ್ನೇ ಅಮಾನತು ಮಾಡುತ್ತೇವೆ ಎಂಬ ಮಾತುಗಳನ್ನು ಆಡಿದ್ದರು. ಇಬ್ರಾಹಿಂ ಅವರನ್ನೇ ಅಮಾನತು ಮಾಡಿ ದೇವೇಗೌಡರು ಶಾಕ್ ನೀಡಿದ್ದಾರೆ.