ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುವಂತಾದಾಗ ಅವರ ಜೊತೆಗೆ ಗಟ್ಟಿಯಾಗಿ ನಿಂತದ್ದು ಅವರ ಪತ್ನಿ ವಿಜಯಲಕ್ಷ್ಮಿ. ಒಂದಷ್ಟು ಷರತ್ತುಗಳನ್ನು ವಿಧಿಸಿ, ಗಂಡನನ್ನು ಬಿಡಿಸಲು, ಅವರ ಹೆಸರನ್ನು ಉಳಿಸುವುದಕ್ಕೆ ಹೋರಾಟ ಮಾಡಿದರು. ಈ ಕಾರಣಕ್ಕಾಗಿಯೇ ವಿಜಯಲಕ್ಷ್ಮಿ ಎಂದರೆ ದರ್ಶನ್ ಅಭಿಮಾನಿಗಳಿಗೂ ತುಂಬಾ ಹೆಮ್ಮೆ. ಜೊತಗೆ ಧನ್ವೀರ್ ಎಂದರೂ ಪ್ರೀತಿ ಜಾಸ್ತಿ.

ಇದೀಗ ದರ್ಶನ್ ಅವರನ್ನ ಇನ್ನಷ್ಟು ಸುರಕ್ಷಿತವಾಗಿ ನೋಡಿಕೊಳ್ಳಲು ಹೆಂಡತಿ ಹಾಗೂ ತಮ್ಮ ಪಣತೊಟ್ಟಿದ್ದಾರೆ. ಅವರ ಬೆಂಗಾವಲಿಗೆ ನಿಂತಿದ್ದಾರೆ. ಅವರ ಸುತ್ತ ಮುತ್ತ ಇದ್ದ ಜನರನ್ನ ರಿಮೂವ್ ಮಾಡಿದ್ದಾರೆ. ಇಷ್ಟು ದಿನ ದರ್ಶನ್ ಭೇಟಿ ಮಾಡಲು ಅವರ ಮ್ಯಾನೇಜರ್ ಅನ್ನ ಕಾಂಟ್ಯಾಕ್ಟ್ ಮಾಡಿದ್ದರೆ ಸಾಕಿತ್ತು. ಈಗ ಆ ಸ್ಥಾನದಲ್ಲಿ ಆ ಮ್ಯಾನೇಜರ್ ಇಲ್ಲವಾಗಿದೆ. ಅಂದ್ರೆ ಅವರ ವಕೀಲರ ಸಲಹೆಯಂತೆ ಅವರ ಮ್ಯಾನೇಜರ್ ನಾಗರಾಜ್ ಹಾಗೂ ಕಾರು ಚಾಲಕ ಲಕ್ಷ್ಮಣ್ ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಾಗಾರಾಜ್ ಹಾಗೂ ಲಕ್ಷ್ಮಣ್ ಕೂಡ ಜೈಲು ಪಾಲಾಗಿದ್ದರು. ಜೊತೆಗೆ ಸ್ಟೋನಿ ಬ್ರೂಕ್ ಮಾಲೀಕ ವಿನಯ್ ಗೂ ವಿಜಯಲಕ್ಷ್ಮಿ ಗೇಟ್ ಪಾಸ್ ಕೊಟ್ಟಿದ್ದಾರೆ.

ಇನ್ಮೇಲೆ ದರ್ಶನ್ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ. ಹೀಗಾಗಿ ಕಾಲ್ ಶೀಟ್ ಪಡೆಯೋದಕ್ಕಾಗಲಿ, ದರ್ಶನ್ ಯಾವುದೇ ವಿಚಾರಕ್ಕೆ ಭೇಟಿ ಮಾಡುವುದಕ್ಕಾಗಲೀ ಮ್ಯಾನೇಜರ್ ಇರೋದಿಲ್ಲ. ಈ ಎಲ್ಲಾ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ಹಾಗೂ ತಮ್ಮ ದಿನಕರ್ ತುಗೂದೀಪ ಅವರೇ ನೋಡಿಕೊಳ್ಳಲಿದ್ದಾರೆ. ದರ್ಶನ್ ಅವರ ಸಂಪೂರ್ಣ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ಅವರೇ ತೆಗೆದುಕೊಂಡಿದ್ದಾರೆ.

