ಚನ್ನಪಟ್ಟಣ ಗೆದ್ದರೆ ಇದೇ ಅವಧಿಯಲ್ಲಿ ಡಿಕೆಶಿ ಮುಖ್ಯಮಂತ್ರಿ ಆಗ್ತಾರಾ..?

suddionenews
1 Min Read

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಬ್ಬರ ಜೋರಾಗಿದೆ. ಈ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ 135 ಸೀಟುಗಳನ್ನು ಪಡೆಯುವಲ್ಲಿ ಡಿಕೆ ಶಿವಕುಮಾರ್ ಅವರ ಶ್ರಮ ಸಾಕಷ್ಟಿತ್ತು. ಅದು ಹೈಕಮಾಂಡ್ ಗೂ ಗೊತ್ತಿರುವ ವಿಚಾರ. ಡಿಕೆಶಿ ಸಿಎಂ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ. ಇದೀಗ ಚನ್ನಪಟ್ಟಣ ಕ್ಷೇತ್ರ ಗೆದ್ದರೆ ಇದೇ ಅವಧಿಯಲ್ಲೇ ಮುಖ್ಯಮಂತ್ರಿಯಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ.

 

ಅದಕ್ಕೆ ಪೂರಕವಾಗಿ ಮಾನಿ ಶಾಸಕ ಎಂಸಿ ಅಶ್ವತ್ಥ್ ಅವರು ಸಭೆಯೊಂದನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಚನ್ನಪಟ್ಟಣದಲ್ಲಿ ಸಿಪಿ ಯೋಗೀಶ್ವರ್ ಅವರನ್ನು ಗೆಲ್ಲಿಸುವ ಮೂಲಕ ಇದೇ ಅವಧಿಯಲ್ಲೇ ಇಕ್ಕಲಿಗ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ಮತದಾರರು ಆಶೀರ್ವದಿಸಬೇಕು. ಇಲ್ಲಿ ಪಕ್ಷ ಗೆದ್ದರೆ ಇದೇ ಅವಧಿಯಲ್ಲೆ ಡಿಕೆ ಶಿವಕುಮಾರ್ ಸಿಎಂ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಯೋಗೀಶ್ವರ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ಅವರಿಗೆ ಚನ್ನಪಟ್ಟಣ ಗೆಲ್ಲಲೇಬೇಕಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಡಿಕೆ ಸುರೇಶ್ ತೆಗೆದುಕೊಂಡಿದ್ದಾರೆ. ಅಣ್ಣನ ಪ್ರತಿಷ್ಠೆಯನ್ನು ಡಿಕೆ ಸುರೇಶ್ ಎತಚತಿ ಹಿಡಿಯಲೇಬೇಕಿದೆ. ಇನ್ನು ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರಿಗೆ ಕರೆಯೊಂದನ್ನು ನೀಡಿದ್ದಾರೆ. ಈ ಹಿಂದೆ ನಡೆದ ಕಹಿ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಡಿ. ಬದಲಿಗೆ ಪಕ್ಷ ಸಂಘಟನೆ, ಹೆಚ್ಚು ಮತ ಸೆಳೆಯಲು ಹಾಗೇ ಚನ್ನಪಟಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮ ಹಾಕಿ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಿದೆ. ಹೀಗಾಗಿ ಸಿಪಿ ಯೋಗೀಶ್ವರ್ ಹೆಲುವಿಗಾಗಿ ಹೋರಾಡೋಣಾ ಎಂದು ಡಿಕೆ ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *