ಸಿಎಂ ಸಿದ್ದರಾಮಯ್ಯ ಅವರು 2023-24ರ ಬಜೆಟ್ ಮಂಡನೆ ಮಾಡಲಾಗಿದ್ದು, ರೈತರಿಗೆ ಭರಪೂರ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ರೈತರ ಜೀವನಾಡಿಯಾಗಿರುವ ಜಾನುವಾರುಗಳ ಕಾಳಜಿಗೆ ಸರ್ಕಾರ ಮುಂದಾಗಿದೆ.
ಕೃಷಿ ಮಾಡುವ ರೈತರ ಮನೆಯಲ್ಲಿ ಹಸು, ಎಮ್ಮೆ, ಕರು, ಮೇಕೆ ಹೀಗೆ ಪ್ರಾಣಿಗಳು ಇರುತ್ತವೆ. ಕೆಲವೊಮ್ಮೆ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತವೆ. ಮಗುವಿನಂತೆ ರೈರು ಜಾನುವಾರುಗಳನ್ನು ಸಾಕಿರುತ್ತಾರೆ. ಹೀಗೆ ಆಕಸ್ಮಿಕವಾಗಿ ಜಾನುವಾರುಗಳು ಸಾವನ್ನಪ್ಪಿದರೆ 10 ಸಾವಿರ ಸಹಾಯ ಧನ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.