ಸರಣಿ ಭೂಕಂಪಗಳ ನಂತರ ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟ..!

ಹೊಸದಿಲ್ಲಿ: ಐಸ್‌ಲ್ಯಾಂಡ್‌ನ ರಾಜಧಾನಿ ರೇಕ್ಜಾವಿಕ್ ಬಳಿಯ ಪರ್ವತದ ಮೇಲೆ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು  ಐಸ್ಲ್ಯಾಂಡಿಕ್ ಹವಾಮಾನ ಕಚೇರಿ (ಐಎಂಒ) ಬುಧವಾರ (ಆಗಸ್ಟ್ 4, 2022) ತಿಳಿಸಿದೆ.

 

ರೇಕ್‌ಜಾವಿಕ್‌ನ ನೈಋತ್ಯದಲ್ಲಿ ರೇಕ್‌ಜಾನೆಸ್ ಪರ್ಯಾಯ ದ್ವೀಪದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದ ಬಳಿ ಸ್ಫೋಟ ಪ್ರಾರಂಭವಾಯಿತು. ಗೆಲ್ಡಿಂಗಡಲೂರ್ ಕಣಿವೆಯಲ್ಲಿನ ವಿಸ್ತೃತ ಬಿರುಕಿನಿಂದ ಲಾವಾ ಹೊರಹೊಮ್ಮಿದೆ.

 

ರಾಜಧಾನಿ ರೇಕ್ಜಾವಿಕ್ ಬಳಿ ಜ್ವಾಲಾಮುಖಿ ಸ್ಫೋಟಗೊಂಡು, ಹಲವಾರು ದಿನಗಳ ತೀವ್ರ ಭೂಕಂಪನ ಚಟುವಟಿಕೆಯ ನಂತರ ಜನವಸತಿಯಿಲ್ಲದ ಕಣಿವೆಯಲ್ಲಿನ ಬಿರುಕುಗಳಿಂದ ಕೆಂಪಾದ ಬಿಸಿ ಲಾವಾ ಮತ್ತು ಹೊಗೆಯು ಚಿಮ್ಮುತ್ತಿದೆ. ವಿಷಕಾರಿ ಅನಿಲಗಳ ಕಾರಣದಿಂದ ಪ್ರವಾಸಿಗರು ಮತ್ತು ನಿವಾಸಿಗಳು ಪ್ರದೇಶವನ್ನು ತೊರೆಯುತ್ತಿದ್ದಾರೆ.

ಪರಿಸ್ಥಿತಿಯನ್ನು ಸಮೀಕ್ಷೆ ಮಾಡಲು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿದ್ದರೂ, ವಿಮಾನಗಳು ಹಾರುವುದನ್ನು ನಿಷೇಧಿಸಲು “ಕೋಡ್ ರೆಡ್” ಅನ್ನು ಘೋಷಿಸಲಾಗಿದೆ ಎಂದು IMO ತಿಳಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *