ಮೈಸೂರು: ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ಬಗ್ಗೆ ಈಗಾಗಲೇ ನಿರ್ಧಾರವನ್ನೇನೋ ಮಾಡಿದ್ದಾರೆ. ಅವರನ್ನ ತಮ್ಮತ್ತ ಸೆಳೆಯಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಓಪನ್ ಆಫರ್ ಕೊಟ್ಟುದ್ದಾರೆ. ಆದ್ರೆ ಈ ಮಧ್ಯೆ ಇಬ್ರಾಹಿಂ ಅವರು ಯಾವಾಗ ರಾಜೀನಾಮೆ ನೀಡ್ತಾರೆ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು.

ಯಾಕಂದ್ರೆ ಸಿಎಂ ಇಬ್ರಾಹಿಂ ಅವರೇ ಹೇಳಿದಂತೆ ಸಾಲ ಇದೆ ತೀರಿಸಿ ರಾಜೀನಾಮೆ ಕೊಡ್ತೇನೆ ಅಂದಿದ್ರು. ಹೀಗಾಗಿ ಹಲವರಲ್ಲಿ ಕ್ಯೂರಿಯಾಸಿಟಿ ಇತ್ತು. ಇದೀಗ ಯಾವಾಗ ರಾಜೀನಾಮೆಯನ್ನು ಕೊಡುತ್ತೇನೆಂದು ಸಿ ಎಂ ಇಬ್ರಾಹಿಂ ಅವರೇ ಹೇಳಿದ್ದಾರೆ. ಫೆ 14 ರಂದು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಅವತ್ತು ಲವರ್ಸ್ ಡೇ. ಹೂವಿನ ಹಾರ ಹಾಕಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜೊತೆಗೆ ಅಂದೇ ಮುಂದಿನ ರಾಜಕೀಯದ ಬಗ್ಗೆ ತೀರ್ಮಾನ ಮಾಡ್ತೇನೆ. ನಾನು ಸದ್ಯ ಹೊಸ ಪಕ್ಷ ಕಟ್ಟೋದಕ್ಕೆ ಹೋಗಲ್ಲ. ಜೆಡಿಎಸ್, ತೃಣಮೂಲ, ಸಮಾಜವಾದಿ ಪಕ್ಷದ ಆಯ್ಕೆಗಳಿವೆ. ಜನಾಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡಿಕೊಳ್ಳುತ್ತೇನೆ. ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಅಸಹಾಯಕರಾಗುತ್ತಿದ್ದಾರೆ. ಆದ್ರೆ ನಾನಂತೂ ಹೋರಾಟ ಶುರು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಅವರ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ.
