ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 30-35 ಕ್ಷೇತ್ರಗಳನ್ನಾದರೂ ತನ್ನದಾಗಿಸಿಕೊಳ್ಳುತ್ತೆ ಎನ್ನಲಾಗುತ್ತಿತ್ತು. ಸಮ್ಮಿಶ್ರ ಸರ್ಕಾರ ರಚನೆಯಾಗುವ ಪರುಸ್ಥಿತಿ ಇದೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಮುಸ್ಲಿಂ ಮತಗಳೆಲ್ಲಾ ಜೆಡಿಎಸ್ ಗೆ ಬರಬೇಕೆಂಬ ಮನೋಭಾವದಿಂದ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಈಗ ಹೀನಾಯ ಸೋಲಿನ ಹಿನ್ನೆಲೆ ಅವರೇ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿದ ಇಬ್ರಾಹಿಂ ಅವರು, ಫಲಿತಾಂಶ ಬಂದ ಮರುದಿನವೇ ಸೋಲಿನ ನೈತಿಕ ಹೊಣೆ ಹೊತ್ತಿದ್ದೇನೆ. ಇವತ್ತು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಬಂದಾಗ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರು. ಈಗ ಈ ಬಾರಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಈ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ. ಮಾನಕ್ಕೆ ಹೋಗ್ತೀವಿ. ಯುಟಿ ಖಾದರ್ ಅವರನ್ನೇ ಡಿಸಿಎಂ ಮಾಡಬಹುದಿತ್ತಲ್ವಾ. ಈಗ ಅವರು ಎದ್ದೇಳಂಗು ಇಲ್ಲ, ಮಾತಾಡುವಂಗು ಇಲ್ಲ ಎಂದಿದ್ದಾರೆ.