ನಾನು ಕಟ್ಟಕಡೆಯ ವ್ಯಕ್ತಿ ಸ್ಥಾನದಲ್ಲಿ ನಿಂತು ಕೆಲಸ‌ ಮಾಡುತ್ತೇನೆ : ಸಿಎಂ ಬೊಮ್ಮಾಯಿ

1 Min Read

 

ಬೆಂಗಳೂರು: ಇಂದಿಗೆ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳು ತುಂಬಿದೆ. ಈ ಹಿನ್ನೆಲೆ ಇಂದು ವಿಧಾನಸೌಧದಲ್ಲಿ 6 ತಿಂಗಳ ಜನಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, 371ಜೆ ಬಂದಾಗಿನಿಂದ ಶೇಕಡ 100ರಷ್ಟು ಹಣ ಬಳಕೆಯಾಗಿಲ್ಲ. ಕೇವಲ ಘೋಷಣೆಗಳಾಗಿ ಉಳಿದಿವೆ. ಹೀಗಾಗಿ ಅನುದಾನ ಸದ್ಬಳಕೆ‌ ಸರಿಯಾಗಿ ಮಾಡಲು ಸೂಚನೆ ನೀಡಲಾಗಿದೆ. ಸದ್ಭಳಕೆ ಮಾಡಿದರೆ ದುಪ್ಪಟ್ಟು ಅನುದಾನ ನೀಡುವುದಾಗಿ ಹೇಳಿದ್ದೇವೆ.

ಐದಾರು ವರ್ಷದಿಂದ ಹುದ್ದೆಗಳು ಖಾಲಿಯಾಗಿದ್ದವು. ಎಲ್ಲಾ ಇಲಾಖೆಗಳಲ್ಲು ಸಾಕಷ್ಟು ಅಭಿವೃದ್ಧಿಯಾಗಿದೆ. ವಸತಿ ಇಲಾಖೆ ಯೋಜನೆ ನೆನಗುದಿಗೆ ಬಿದ್ದಿದೆ. ಈ ಬಗ್ಗೆ ನರೇಂದ್ರ ಮೋದಿ ಜೊತೆ ಚರ್ಚಿಸಿದ್ದೆ. ಚರ್ಚಿಸಿ ಬೆಂಗಳೂರಿಗೆ ಬರುವಷ್ಟರಲ್ಲಿ ಮಾಹಿತಿ ಪಡೆದಿದ್ದರು. ವಸತಿ ಇಲಾಖೆ ಸಂಪೂರ್ಣ ಮಾಹಿತಿ ಕೇಳಿದ್ದರು. ಲಾಕ್ ಆಗಿದ್ದ 6.5 ಲಕ್ಷ ಮನೆಗಳನ್ನು ತಕ್ಷಣ ರಿಲೀಸ್ ಮಾಡಿದರು.

ಈ ಆರು ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. 4.52 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆ ತಲುಪಿದೆ. ಪಡಿತರ ಪಡೆಯುತ್ತಿರುವ 4 ಕೋಟಿ ಜನ ಏನು ಹೇಳುತ್ತಾರೆ ಅನ್ನೋದು ಮುಖ್ಯ. ಸವಾಲು ಎದುರಿಸಬಲ್ಲ ಆತ್ಮಶಕ್ತಿ ಇದೆ. ಆರು ತಿಂಗಳ ಅವಧಿಯಲ್ಲಿ ಲಾಭವಾಗಿದೆ. ರಾಜ್ಯದ ಜನರಿಟ್ಟ ನಂಬಿಕೆಗೆ ಗೌರವ ಬರುವಂತೆ ಕೆಲಸ ಮಾಡಿದ್ದೇವೆ.

ಆಡಳಿತ ಕ್ರಿಕೆಟ್ ನಂತೆ ಅಲ್ಲ ಒಂದು ಪುಟ್ಬಾಲ್ ಟೀಂ ನಂತೆ. ಬಾಲ್ ನಮ್ಮ ಬಳಿ ಬಂದಾಗ ಹೊಡೆದರೆ ಗೋಲ್ ಹೊಡೆದಂತೆ. ನಾನು ಕಟ್ಟಕಡೆ ವ್ಯಕ್ತಿಯ ಸ್ಥಾನದಲ್ಲಿ ನಿಂತು ಕೆಲಸ ಮಾಡ್ತೇನೆ. ಅಭಿವೃದ್ಧಿ ಜೊತೆಗೆ ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ಗೃಹ ಇಲಾಖೆ ಉತ್ತಮವಾಗಿ ಕೆಲಸ ಮಾಡ್ತಿದೆ. ಗೃಹ ಸಚಿವರು ಮುಂದೆ ನಿಂತು ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಹಲವರು ಕೆಲಸ ಮಾಡಿದ್ದಾರೆ. ಸ್ವಯಂಪ್ರೇರಿತವಾಗಿ ನಿಂತು ಕೆಲಸ ಮಾಡಿದ್ದಾರೆ. ಅಂತವರನ್ನು ಇಂತ ಸಮಯದಲ್ಲಿ ಸ್ಮರಿಸುವುದು ನನ್ನ ಧರ್ಮ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *