I Wish Him All The Best : ಡಿಕೆ ಶಿವಕುಮಾರ್

1 Min Read

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಾರಿ ಸಿಎಂ ಆಗಬೇಕು ಎಂದು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಮಾತುಕತೆ ಏನಾಗಿದೆ ಅನ್ನೋದು ನಮ್ಮಿಬ್ಬರಿಗೆ ಗೊತ್ತು. ಹೈಕಮಾಂಡ್ ನಿರ್ಧಾರದಂತೆ ನಾವೂ ನಡೆದುಕೊಳ್ಳುತ್ತೇವೆ ಎಂದು ಶಾಂತಯುತವಾಗಿಯೇ ಕಾಂಪ್ರುಮೈಸ್ ಆಗುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಹೈಕಮಾಂಡ್ ಹೇಳಿದಂತೆ ನಡೆಯಲು ಬದ್ಧ ಎಂದಿದ್ದಾರೆ. ಇನ್ನೊಂದು ಚರ್ಚೆಯಾಗಿದ್ದು ಏನಂದ್ರೆ ಸಿದ್ದರಾಮಯ್ಯ ಅವರಿಗೆ ದೇವರಾಜ್ ಅರಸು ಅವರ ದಾಖಲೆ ಮುರಿಯಬೇಕೆಂಬ ಬಯಕೆ. ಹೀಗಾಗಿಯೇ ಈಗಲೇ ಅವರು ಸ್ಥಾನವನ್ನ ಬಿಟ್ಟುಕೊಡುತ್ತಿಲ್ಲ ಎಂಬ ಮಾತಿತ್ತು.

ಇದೀಗ ಆ ದಾಖಲೆಯನ್ನ ಸಿದ್ದರಾಮಯ್ಯ ಅವರು ಮುರಿದಿದ್ದಾರೆ. ಆ ಬಗ್ಗೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ರೀತಿಯ ಗೊಂದಲವಿಲ್ಲ. ಶುಭ ಹಾರೈಸ್ತೀನಿ. ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. I Wish Him All The Best. ನಮಗ್ಯಾರಿಗೂ ಗೊಂದಲ ಇಲ್ಲ, ನಿಮಗೆ ಗೊಂದಲ ಎಂದಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಕುರ್ಚಿ ವಿಚಾರಕ್ಕೆ ಶೀತಲ ಸಮರವಿದೆ. ನಾ ಕೊಡೆ ನೀ ಬಿಡೆ ಎಂಬ ಹಠವಿದ್ದರು, ಹೊರಗಿನ ಪ್ರಪಂಚಕ್ಕೆ ಅಂದರೆ ಹೊರಗಡೆ ಬಂದಾಗ, ವೇದಿಕೆ ಹಂಚಿಕೊಂಡಾಗ ಇಬ್ಬರು ಕೂಡ ವಿಪಕ್ಷಗಳಿಗೆ ಆಹಾರವಾಗಿಲ್ಲ. ನಾವೆಲ್ಲರು ಒಂದು, ನಮ್ಮಲ್ಲಿ ಒಗ್ಗಟ್ಟಿದೆ ಎಂಬುದನ್ನೇ ಪ್ರದರ್ಶನ ಮಾಡಿದ್ದಾರೆ. ಸದ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಬೆಂಬಲಿಗರು ಜನವರಿ 6 ಮತ್ತು 9 ಎಂಬ ದಿನಾಂಕವನ್ನ ಹೇಳ್ತಾ ಇದ್ರು. 6 ಮುಗಿದಿದೆ. ದಾಖಲೆಯನ್ನು ಬರೆದಿದ್ದಾರೆ. ಈಗೇನಿದ್ದರು 9 ಅನ್ನ ನೋಡಬೇಕಿದೆ. ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಅಂತ ಎಲ್ಲರು ಕಾಯ್ತಿದ್ದಾರೆ.

Share This Article